Cinema News
ಅಪ್ಪು ಸ್ಮಾರಕ ನಿರ್ಮಾಣ ಮಾಡಿದ ಸಾಗರ ತಾಲೂಕಿನ ಗ್ರಾಮಸ್ಥರು

ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 8 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು ಮಾತ್ರ ಇಂದಿಗೂ ಅಪ್ಪು ಇಲ್ಲ ಅನ್ನೋದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪುನೀತ್ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತಲೆ ಇವೆ. ಪುನೀತ್ ನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅತ್ಯಾಕರ್ಷಕವಾದ ಪುನೀತ್ ಸ್ಮಾರಕ ನಿರ್ಮಾಣ ಮಾಡಿದ್ದಾರೆ.
ಪುನೀತ್ ಮೇಲಿರುವ ಪ್ರೀತಿಗಾಗಿ ಅಪ್ಪು ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿ, ವಿಶೇಷ ಗೌರವ ಸಲ್ಲಿಸಿದ್ದಾರೆ.
ಸ್ಮಾರಕ ನಿರ್ಮಾಣದ ಜೊತೆಗೆ ಕಾರಂಜಿಯನ್ನು ನಿರ್ಮಾಣ ಮಾಡಿದ್ದಾರೆ. ಗ್ರಾಮದವರೆಲ್ಲರೂ ಸೇರಿ ಈ ಸ್ಮಾರಕ ನಿರ್ಮಾಣ ಮಾಡಿದ್ದು, ಗ್ರಾಮದ ಹಿರಿಯರಿಂದಲೇ ಸ್ಮಾರಕ ಉದ್ಘಾಟನೆ ಮಾಡಿಸಲಾಗಿದೆ.

Continue Reading