Connect with us

Cinema News

‘ಸ್ಪಾರ್ಕ್ ಲೈಫ್’ ಸಿನಿಮಾದ ಟ್ರೇಲರ್ ಅನಾವರಣ..ನ.17ಕ್ಕೆ ವಿಶ್ವಾದ್ಯಂತ ತೆಲುಗಿನ ಯುವ ನಟ ವಿಕ್ರಾಂತ್ ಚಿತ್ರದ ದಿಬ್ಬಣ

Published

on

ತೆಲುಗಿನ ಯುವ ನಟ ವಿಕ್ರಾಂತ್ ನಟನೆಯ ಸ್ಪಾರ್ಕ್ ಲೈಫ್ ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 17ಕ್ಕೆ ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸ್ಪಾರ್ಕ್ ಲೈಫ್ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿಸಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಾಗಿತ್ತು.

ಈ ವೇಳೆ ಮಾತನಾಡಿದ ನಾಯಕ ವಿಕ್ರಾಂತ್, ಸ್ಪಾರ್ಕ್ ಸಿನಿಮಾ ನನ್ನ ಮೂರು ವರ್ಷದ ಕನಸು. ಎಲ್ಲರಿಗೂ ಟ್ರೇಲರ್ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಈ ಚಿತ್ರಕ್ಕಾಗಿ ಒಂದುವರೆ ವರ್ಷ ಕಥೆ ಬರೆದೆ. ಇನ್ನೊಂದುವರೆ ವರ್ಷ ನಿರ್ಮಾಣದಲ್ಲಿ ತೊಡಗಿಸಿಕೊಂಡೆ. ಮೇಕಿಂಗ್ ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಾಮಿಡಿ, ಪ್ರೀತಿ, ಥ್ರಿಲ್ಲಿಂಗ್ ಎಲಿಮೆಂಟ್ ಎಲ್ಲವೂ ಸಿನಿಮಾದಲ್ಲಿದೆ. ನಾನು ನಾಯಕನಾಗಿಯೂ ಬಣ್ಣ ಹಚ್ಚಿದ್ದೇನೆ ಎಂದರು.

ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಷಾರ್ ಧಿಲ್ಲೋನ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಖಳನಾಯಕನಾಗಿ ನಟಿಸಿದ್ದಾರೆ. ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಬ್ರಹ್ಮಾಜಿ, ಶ್ರೀಕಾಂತ್ ಅಯ್ಯಂಗಾರ್, ಚಮ್ಮಕ್ ಚಂದ್ರ, ಅನ್ನಪೂರ್ಣಮ್ಮ, ರಾಜಾ ರವೀಂದ್ರ ಮುಂತಾದ ತಾರಾಬಳಗದಲ್ಲಿದ್ದಾರೆ.

ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಾಂತ್ ನಾಯಕನಾಗಿ ನಟಿಸುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ಹೃದಯಂ’ ಮತ್ತು ಕುಶಿ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡುತ್ತಿದ್ದಾರೆ.

ಆಕ್ಷನ್ ದೃಶ್ಯಗಳ ಜೊತೆಗೆ ಎಮೋಷನ್ಸ್, ಲವ್ ಮುಂತಾದ ಅಂಶಗಳನ್ನು ಇಟ್ಟುಕೊಂಡು ಸ್ಪಾರ್ಕ್ ಲೈಫ್ ಸಿನಿಮಾ ಮಾಡಲಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿರುವ ಈ ಚಿತ್ರ, ನವೆಂಬರ್ 17ಕ್ಕೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *