Cinema News
ನಿರೀಕ್ಷೆ ಹೆಚ್ಚಿಸಿದ ಲವ್ ಯು ಮುದ್ದು ಟ್ರೇಲರ್.. ನವೆಂಬರ್ 7ಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕರ ಹೊಸ ಚಿತ್ರ

ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು ಎಂಬ ಎಳೆಯನ್ನು ಇಟ್ಕೊಂಡು ಬರ್ತಿರುವ ಸಿನಿಮಾ ಲವ್ ಯು ಮುದ್ದು. ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್ ಅವರ ಹೊಸ ಪ್ರಯತ್ನದ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 7ರಂದು ಲವ್ ಯು ಮುದ್ದು ಸಿನಿಮಾ ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕರು ಹಾಗೂ ಖ್ಯಾತ ಛಾಯಾಗ್ರಹಕ ಜೆ ಜಿ ಕೃಷ್ಣ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.
ಟ್ರೇಲರ್ ಬಿಡುಗಡೆ ಬಳಿಕ ಖ್ಯಾತ ಛಾಯಾಗ್ರಹಕ ಜೆಜಿ ಕೃಷ್ಣ ಮಾತನಾಡಿ, ಟ್ರೇಲರ್ ನೋಡಿದಾಗ ಹೀರೋ, ಹೀರೋಯಿನ್ ಚೆನ್ನಾಗಿ ನಟಿಸಿದ್ದಾರೆ. ಡೈರೆಕ್ಟರ್ ಹಾಗೂ ಕ್ಯಾಮೆರಾ ಮೆನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ಸಿನಿಮಾ ಅದ್ಭುತವಾಗಿ ಇರಲಿದೆ ಎಂಬ ನಂಬಿಕೆ ಇದೆ. ನಿಮ್ಮ ಚಿತ್ರದ ಪ್ರತಿ ಫ್ರೇಮ್ ಸುಂದರವಾಗಿ ಇದೆ. ನಿರ್ಮಾಪಕರು ಉಳಿದರೆ ನೂರು ಫ್ಯಾಮಿಲಿಗೆ ಊಟ ಹಾಕುತ್ತಾರೆ. ಆ ನಿರ್ಮಾಪಕರು ಗೆಲ್ಲಬೇಕು ಎಂದರು.
ನಟಿ ಸಂಜನಾ ಆನಂದ್ ಮಾತನಾಡಿ, ಲವ್ ಯು ಮುದ್ದು ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಕುಮಾರ್. ಅವರ ಬರವಣಿಗೆ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಎಷ್ಟು ಸಕ್ಸಸ್ ಕೊಟ್ಟಿತ್ತೋ ಅದರ ನೂರಷ್ಟು ಸಕ್ಸಸ್ ಈ ಚಿತ್ರ ಕೊಡಲಿ. ಸಿದ್ದು ಅವರ ಡಿಡಿಕೇಷನ್ ನೋಡಿ ಖುಷಿಯಾಯ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ.ಇದೇ ನವೆಂಬರ್ 7ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದರು.
ನಿರ್ದೇಶಕ ಕುಮಾರ್ ಮಾತನಾಡಿ, ಇದು ನನ್ನ ಐದನೇ ಸಿನಿಮಾ. ಈಜಾನರ್ ಬಿಟ್ಟು ಇದು ಬೇರೆ ವಿಷಯ.ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇಟ್ಕೊಂಡು ಸಿನಿಮಾ ಹೇಳಲಾಗಿದೆ. ಇದು ಮನಸ್ಸಿಗೆ ಮುಟ್ಟುವ ಕಥೆ. ನಿರ್ಮಾಪಕರು ನನ್ನ ಮೊದಲ ಸಿನಿಮಾದಿಂದ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಇದೀಗ ಲವ್ ಯು ಮುದ್ದು ಚಿತ್ರಕ್ಕೆ ಹಣ ಹಾಕಿದ್ದಾರೆ. ಒಳ್ಳೆ ತಾರಾ ಬಳಗ ಚಿತ್ರದಲ್ಲಿದೆ ಎಂದರು.

ಪ್ರಾಮಿಸಿಂಗ್ ಆಗಿದೆ ಟ್ರೇಲರ್
ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಪ್ರೀತಿಯೇ ಸಕಲವು, ಸರ್ವಸ್ವ ಎಂದು ನಂಬಿದ್ದ ಜೋಡಿಯ ಬಾಳಲ್ಲಿ ನಡೆದ ತಿರುವನ್ನು ಕಾಡುವಂತೆ ನಿರ್ದೇಶಕ ಕುಮಾರ್ ಸೊಗಸಾಗಿ ಎಣೆದಿದ್ದಾರೆ. ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿವೆ.
ಸಿದ್ದು ಮೂಲಿಮನಿ ಈ ಸಿನಿಮಾಕ್ಕೆ ನಾಯಕ. ಯುವನಟಿ ರೇಷ್ಮಾ ನಾಯಕಿ. ಸಿನಿಮಾದಲ್ಲಿ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ.
ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿ.ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್. ಇದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ.ಎಸ್.ದೀಪು ಸಂಕಲನ ಚಿತ್ರಕ್ಕಿದೆ.
ಲವ್ ಯು ಮುದ್ದು ಸಿನಿಮಾ ನವೆಂಬರ್ 7ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಜಗದೀಶ್ ಫಿಲ್ಮಂ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.
