Cinema News

ಚಿತ್ರೀಕರಣ ಮುಗಿಸಿದ ಹಾರರ್ ಥ್ರಿಲ್ಲರ್ “ತಾಳಟ್ಟಿ”

Published

on

ಸೆವೆನ್‍ಸ್ಟಾರ್ ಪ್ರೊಡಕ್ಷನ್ಸ್ ಮತ್ತು ಸೃಜನ ಮೀಡಿಯಾಹೌಸ್ ಸಹಕಾರದಲ್ಲಿ, ಕಲ್ಪತರು ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾರರ್, ಸಸ್ಪೆನ್ಸ್ ಕಥೆ ಹೊಂದಿದ ಚಿತ್ರ ‘ತಾಳಟ್ಟಿ’. ಹರ್ಷವರ್ಧನ್, ಹಯಾತ್‍ಖಾನ್, ರಾಕೇಶ್.ಡಿ, ದಿಲೀಪ್‍ಕುಮಾರ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೊಡಿರುವ ಈ ಚಿತ್ರಕ್ಕೆ ಗಿಲ್ಲಿ ವೆಂಕಟೇಶ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

 

ಪ್ರೀತಿ, ಪ್ರೇಮ ಎಂದು ಯುವತಿಯರ ಹಿಂದೆ ಅಲೆದಾಡುವ ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ ಸ್ವರ್ಗ, ಸಿಗದಿದ್ದರೆ ನರಕ. ಈ ಸ್ವರ್ಗ ಮತ್ತು ನರಕದ ಹಾದಿಗಳು ಜೋಡಿರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವವನ್ನ ಎಳೆ, ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಈ ಚಿತ್ರದಲ್ಲಿದೆ. ನಾಯಕನ ಸ್ನೇಹಿತನಿಂದಾದ ಒಂದು ಘಟನೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಒಳಿತಾದರೂ, ಮುಂದೆ ಅದೇ ಘಟನೆಯಿಂದ ನಾಯಕನ ಕುಟುಂಬಕ್ಕೆ ತೊಂದರೆಯುಂಟಾಗಿ, ನಾಯಕನ ಜೀವಕ್ಕೂ ತೂಗುಕತ್ತಿಯಾಗುತ್ತದೆ. ಕೊನೆಗೆ ನಾಯಕ ತನ್ನ ಜೀವವನ್ನ ಉಳಿಸಿಕೊಳ್ಳಲು ಪಡುವ ಪ್ರಯತ್ನವೇ ತಾಳಟ್ಟಿ ಚಿತ್ರದ ಕಥಾನಕ.

 

 

ಈ ಚಿತ್ರಕ್ಕೆ ಇಮ್ತಿಯಾಜ್‍ಖಾನ್ ಹಾಗೂ ಅಶೋಕ್ ಹಣಗಿ ಅವರ ಕ್ಯಾಮರಾ ಕೈಚಳಕವಿದ್ದು, ರಕ್ಷಿತ್ ಜಿ. ಮಲ್ಲಪ್ಪ ಸಂಕಲನಕಾರ್ಯ ನಿರ್ವಹಿಸಿದ್ದಾರೆ. ಅಭಿನಂದನ್ ಕಶ್ಯಪ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಈ ಚಿತ್ರದ ನಾಯಕ ನಟನಾಗಿ ಯತೀಶ್, ನಾಯಕಿಯಾಗಿ ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿ ನಟರಾಜ, ದಿಲೀಪ್‍ಕುಮಾರ್, ಸಿದ್ದು ಮಂಡ್ಯ, ಮೋನಿಷಾ, ಕಲಾ ಮಂಜುನಾಥ್, ಮಾದಪ್ಪ ಮಂಡ್ಯ, ಶ್ರೀನಿವಾಸ್ ಸೇರಿದಂತೆ ಹಲವಾರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

 

ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸೆಂಟಿಮೆಂಟ, ಎಮೋಷನ್ಸ್, ಫ್ಯಾಮಿಲಿ ರಿಲೇಶನ್ ಜೊತೆಗೆ ಪ್ರೇಕ್ಷಕರನ್ನು ಕಾಮಿಡಿ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಕಂಟೆಂಟ್ ಇದೆ ಎನ್ನುವುದು ನಿರ್ದೇಶಕರ ಮಾತು.

 

Spread the love
Click to comment

Copyright © 2019 PopcornKannada.com