Cinema News
3 ಮದುವೆ ಆಗಿರುವ ಪೋಷಕ ನಟನ ಜೊತೆ 2ನೇ ಮದುವೆಗೆ ಸಿದ್ದವಾದ ನಟಿ ಪವಿತ್ರ ಲೋಕೇಶ್

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ಪವಿತ್ರಾ ಲೋಕೇಶ್. ತಮ್ಮ ಸಹಜ ಅಭಿನಯದಿಂದಲೇ ಮನೆ ಮಾತಾಗಿರುವ ಪವಿತ್ರ ಲೋಕೇಶ್ ಖ್ಯಾತ ನಟ ಮೈಸೂರು ಲೇಕೇಶ್ ಮಗಳು.
ಒಂದು ಕಾಲದಲ್ಲಿ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪವಿತ್ರಾ ಲೋಕೇಶ್ ಸದ್ಯ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪವಿತ್ರಾ ಲೋಕೇಶ್ ಕುರಿತಾದ ಸುದ್ದಿಯೊಂದು ಹರಿದಾಡುತ್ತಿದೆ.
ಸದ್ಯ ಮದುವೆಯಾಗಿರೋ ನಟಿ ಪವಿತ್ರ ಲೋಕೇಶ್ ಇದೀಗ ಎರಡನೇ ಮದುವೆಗೆ ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗ್ಲೆ ಮೂರು ಮದುವೆಯಾಗಿರೋ ತೆಲುಗು ನಟ ನರೇಶ್ ಜೊತೆ ಪವಿತ್ರ ಲೋಕೇಶ್ ಎರಡನೇ ಮದುವೆಯಾಗ್ತಿದ್ದಾರೆ ಎನ್ನಲಾಗ್ತಿದೆ.
ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಇದೀಗ ಪವಿತ್ರ ಲೋಕೇಶ್ ಜೊತೆ ನಾಲ್ಕನೆ ಮದುವೆಯಾಗ್ತಿದ್ದಾರೆ ಎನ್ನಲಾಗ್ತಿದೆ. ಒಂದಷ್ಟು ಸಿನಿಮಾಗಳಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಸ್ನೇಹ ಶುರುವಾಗಿದೆಯಂತೆ. ಇಬ್ಬರು ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದು, ಶೀಘ್ರದಲ್ಲೇ ಮದುವೆ ಆಗಲು ಮನಸ್ಸು ಮಾಡಿದ್ದಾರೆ ಎಂಬ ಗುಸಗುಸು ಕೇಳಿಬರ್ತಿದೆ.
ಈಗಾಗಲೇ ಪವಿತ್ರಾ ಲೋಕೇಶ್ ಕನ್ನಡ ಖ್ಯಾತ ನಟ ಸುಚೇಂದ್ರ ಪ್ರಸಾದ್ ಜೊತೆ ವಿವಾಹವಾಗಿದ್ದಾರೆ. ಇತ್ತೀಚೆಗೆ ನರೇಶ್ ಮತ್ತು ಪವಿತ್ರಾ ಮಹಾಬಲಿಪುರಂನಲ್ಲಿ ಸ್ವಾಮೀಜಿ ಒಬ್ಬರನ್ನು ಭೇಟಿ ಮಾಡಿ ಬಂದಿದ್ದಾರೆ. ಅಂದಿನಿಂದ ಇಬ್ಬರು ಮದುವೆ ಆಗ್ತಾರೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಸಾವಿರಾರು ಕೋಟಿಯ ಒಡೆಯನಾಗಿರೋ ನರೇಶ್ ಖ್ಯಾತ ನಟಿ ವಿಜಯ ನಿರ್ಮಲಾ ಅವರ ಪುತ್ರ. ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನರೇಶ್ ನಂತರ ಹೀರೋ ಆಗಿಯೂ ಗುರುತಿಸಿಕೊಂಡಿದ್ದರು. ಸದ್ಯ ಪೋಷಕ ಕಲಾವಿದರಾಗಿ ಕಾಣಿಸಿಕೊಳ್ತಿದ್ದಾರೆ. ಪವಿತ್ರ ಲೋಕೇಶ್ ಹಾಗೂ ನರೇಶ್ ಮದುವೆಯ ಸುದ್ದಿ ನಿಜವೋ, ಸುಳ್ಳೋ ಅನ್ನೋದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ.
