Cinema News
ಬಂಡೀಪುರದ ಕಾಡಿನಲ್ಲಿ ರಜನಿಕಾಂತ್
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಮತ್ತು ಮಂಗಳವಾರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಕಾಡಿನಲ್ಲಿ ಓಡಾಡಿದ್ದಾರೆ.
ಹೌದು, ಡಿಸ್ಕವರಿ ಚಾನೆಲ್‌ಗಾಗಿ ನಡೆದ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬೇರ್ ಗ್ರಿಲ್ಸ್ ರಜಿನಿಕಾಂತ್ ಚಿತ್ರೀಕರಣ ಮಾಡಿದ್ದಾರೆ. ಈ ಎಪಿಸೋಡ್ ಮಾಡಿರುವುದು ನೀರಿನ ಸಂರಕ್ಷಣೆಗಾಗಿ ಎಂದು ಡಿಸ್ಕವರಿ ಚಾನಲೆ್ ತನ್ನ ಅಧಿಕೃತ ಟ್ವೀಟರ್ ಅಕೌಂಟ್‌ನಲ್ಲಿ ಹೇಳಿಕೊಂಡಿದೆ. ಇನ್ನು ಈ ಕಾರ್ಯಕ್ರಮದ ಹೆಸರು ‘ಇಂಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಅನ್ನೋ ಹೊಸ ಕಾರ್ಯಕ್ರಮಕ್ಕಾಗಿ ತಲೈವಾ ರಜಿ ಬಂಡೀಪುರದ ಕಾಡನ್ನು ಅಲೆದಿದ್ದಾರೆ. ‘ಇಂಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ನ ಮೂಲಕ ರಜಿನಿಕಾಂತ್ ಮೊದಲ ಬಾರಿಗೆ ಟಿವಿಗೆ ಬರುತ್ತಿದ್ದಾರೆ. ರಜಿನಿಕಾಂತ್ ಆದ ನಂತರ ಅಕ್ಷಯ್‌ಕುಮಾರ್ ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.