Cinema News

ರಾ ರಾ ರಕ್ಕಮ್ಮ ಹಾಡಿನ ಎಫೆಕ್ಟ್: ಪೌರ ಕಾರ್ಮಿಕರನ್ನು ಮನೆಗೆ ಕರೆಸಿ ಉಪಚರಿಸಿದ ಸುದೀಪ್

Published

on

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಸುದೀಪ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಸಖತ್ ವೈರಲ್ ಆಗುತ್ತಿದೆ. ಈ ಮಧ್ಯೆ ಪೌರ ಕಾರ್ಮಿಕರು ಈ ಹಾಡಿಗೆ ಹೆಜ್ಜೆ ಹಾಕಿದ್ದು ನೋಡಿ ಸ್ವತಃ ಸುದೀಪ್ ಅವರನ್ನು ಮನೆಗೆ ಕರೆಸಿ ಅಧಾರಿಸಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ತುಣುಕಿಗೆ ಹೆಜ್ಜೆ ಹಾಕಿದವರ ವಿಡಿಯೋ ವೈರಲ್ ಆಗುತ್ತಿವೆ. ಅದರಲ್ಲಿ ಪೌರ ಕಾರ್ಮಿಕರ ವಿಡಿಯೋ ಕೂಡ ಒಂದು. ಧಾರವಾಡದ ಕೆಲ ಪೌರ ಕಾರ್ಮಿಕರು ‘ರಾ ರಾ ರಕ್ಕಮ್ಮ’ ಎಂದು ಕುಣಿದಿದ್ದು, ಈ ವಿಡಿಯೋವನ್ನ ಅಸಂಖ್ಯಾತ ನೋಡುಗರು ಮೆಚ್ಚಿಕೊಂಡಿದ್ದಾರೆ.
ಧಾರವಾಡದ ಕೆಲ ಪೌರ ಕಾರ್ಮಿಕರು ಈ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಮೂವತ್ತು ಸಾವಿರ ಖರ್ಚು ಮಾಡಿದ್ದರಂತೆ. ಆ ವಿಡಿಯೋವನ್ನು ನೋಡಿದ ಕಿಚ್ಚ ಸುದೀಪ್, ಅಷ್ಟೂ ಪೌರ ಕಾರ್ಮಿಕರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಉಪಚರಿಸಿದ್ದು ಅವರೊಂದಿಗೆ ಕೆಲ ಕಾಲ ಸಮಯ ಕಳೆದು ಫೋಟೋ ತೆಗೆಸಿಕೊಂಡಿದ್ದಾರೆ. ಕಿಚ್ಚನ ಮನೆಗೆ ಬಂದ ಕಾರ್ಮಿಕರು ಕೂಡ ನೆಚ್ಚಿನ ನಟನನ್ನು ಕಂಡು ನೋಡಿ ಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಪೌರ ಕಾರ್ಮಿಕರು, ತಾವು ಸುದೀಪ್ ಅವರ ಅಭಿಮಾನಿಗಳು. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಆಗಲೆಂದು ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಸೆಟ್ ಹಾಕಿ ಹಾಡನ್ನು ಶೂಟ್ ಮಾಡಿದ್ದೆವು. ಅದನ್ನು ಸುದೀಪ್ ಅವರು ನೋಡಿ, ನಮ್ಮನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ. ಇದು ಮರೆಯಲಾರದ ಕ್ಷಣವಾಗಿದ್ದು ಸ್ವತಃ ದೇವರನ್ನು ಭೇಟಿ ಮಾಡಿದಷ್ಟು ಖುಷಿ ಆಗಿದೆ ಎಂದಿದ್ದಾರೆ.

Spread the love
Click to comment

Copyright © 2019 PopcornKannada.com