Connect with us

Cinema News

ಎಲ್ಲೋ ಬೋರ್ಡ್ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್

Published

on

ಟ್ಯಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ, ಅವರಲ್ಲು ಮಾನವೀಯತೆ ಇರುತ್ತದೆ ಎಂಬ ಉತ್ತಮ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಎಲ್ಲೋ ಬೋರ್ಡ್, ಇದೇವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ‌ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನೆರವೇರಿತು.‌ ತ್ರಿಲೋಕ್ ರೆಡ್ಡಿ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟ ಕಿಚ್ಚ ಸುದೀಪ್ ಪ್ರದೀಪ್ ನಮ್ಮ‌ಮನೆ ಮಗನಿದ್ದ ಹಾಗೆ, ಅವನು ಶಿವರಾಂ ಅಳಿಯನಾಗಿದ್ದರೂ ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕೂಡ ಈ ಸಿನಿಮಾವನ್ನು ನೋಡಿದೆ. ಚರನ್ನಾಗಿದೆ. ಒಂದೊಳ್ಳೇ ಮೊಸೇಜ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕ್ಯಾಬ್ ಡ್ರೈವರ್ ಗಳಿಗೆ ಗೌರವ ಕೊಟ್ಟಿದ್ದಾರೆ. ನಾವು ಮಾಡಿದ ಚಿತ್ರವನ್ನು ಯಾರಿಗಾದರೂ ತೋರಿಸುವಾಗ ಸ್ವಲ್ಪ ಮುಜುಗರವಿರುತ್ತದೆ.‌ ಇಲ್ಲಿ ನಿರ್ದೇಶಕರಿಗಿರುವ ಆತಂಕ ಕಂಡು ‌ನನ್ನ ಹಳೇ ಸಿನಿಮಾಗಳು ನೆನಪಾದವು ಎಂದು ಹೇಳಿದರು.

ನಂತರ ಮಾತನಾಡಿದ ನಾಯಕ ಪ್ರದೀಪ್ ಈ ಥರದ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ. ಎಂಟೈರ್ ಕರ್ನಾಟಕ ಸುತ್ತಿ‌ಚಾಲಕರನ್ನೆಲ್ಲ‌ ಮಾತಾಡಿಸಿ ಬಂದಿದ್ದೇವೆ. ಎಲ್ಲಾಕಡೆ ನಮಗೆ ತುಂಬಾ ಗೌರವ ನೀಡಿ ಸಪೋರ್ಟ್ ಮಾಡಿದರು.‌ ನಮ್ಮಬಗ್ಗೆ ಗೌರವ ತರುವಂಥ ಸಿನಿಮಾ ಮಾಡಿದ್ದೀರಿ. ನಾವೆಲ್ಲ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದು ಹೇಳಿದರು ನಮ್ಮ ಸಿನಿಮಾ ಇಷ್ಟೊಂದು ಪ್ರಭಾವ ಬೀರಿದ್ದು ಕಂಡು ಖುಷಿಯಾಯ್ತು ಎಂದು ಹೇಳಿದರು.
ನಿರ್ದೇಶಕ ತ್ರಿಲೋಕ್ ಮಾತನಾಡಿ ಆಟೋರಾಜ ಎಂದರೆ ಶಂಕರ್ ನಾಗ್ ಹೇಗೆ ನೆನಪಾಗ್ತಾರೋ ಹಾಗೇ ಎಲ್ಲೋಬೋರ್ಡ್ ಅಂದ್ರೆ ಪ್ರದೀಪ್ ನೆನಪಾಗುವಂತೆ ಸಿನಿಮಾ ಮೂಡಿಬಂದಿದೆ. ಈ ಚಿತ್ರ ಆರಂಭಿಸಿದಾಗಿನಿಂದಲೂ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಹಿಂದೆ ಟೀಸರ್, ಟ್ರೈಲರ್ ರಿಲೀಸ್ ಮಾಡಿದ್ದರು. ಈಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಎಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಾಲಕರಿಗೆ ಸ್ಪೂರ್ತಿ ನೀಡುವ ಹಾಡೊಂದನ್ನು ಹಾಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಾಗಿರುವುದಿಲ್ಲ, ಅವರಲ್ಲಿ ಒಳ್ಳೆಯವರೂ ಇರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಅಹಲ್ಯಾ ಸುರೇಶ್ ಹಾಗೂ ಸ್ನೇಹಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಂಟೇಜ್ ಫಿಲಂಸ್ ಮೂಲಕ‌ ನವೀನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *