Cinema News
ಶ್ರೀಮುರಳಿ ಮುಂದಿನ ಚಿತ್ರ “ಮದಗಜ” ಅಲ್ಲ

ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್‌ಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಮದಗಜ ಸಾಕಷ್ಟು ಬದಲಾವಣೆಗಳೊಂದಿಗೆ ಚಿತ್ರೀಕರಣ ಆರಂಭವಾಗುತ್ತದೆ. ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಗೆ ಪ್ರಶಾಂತ್ ನೀಲ್ ತಮ್ಮ ಸ್ಫರ್ಶ ನೀಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದ ಬೆನ್ನಲ್ಲೆ ಈಗ ಸಿನಿಮಾದ ಟೈಟಲ್ ಕೂಡಾ ಬದಲಾಗಲಿದೆಯಂತೆ.
ಹೌದು ಹೀಗೊಂದು ಸುದ್ದಿಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿದ್ದು, ಈ ಬಗ್ಗೆ ಚಿತ್ರತಂಡ ಯಾವುದೇ ಕ್ಲಾರಿಟಿ ಕೊಡುತ್ತಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಮದಗಜ ಟೈಟಲ್ ಬದಲಾಗುತ್ತದೆ. ಈ ಟೈಟಲ್‌ನ್ನು ಮಹೇಶ್‌ಕುಮಾರ್ ಬಹಳ ಕಷ್ಟಪಟ್ಟು ಪಡೆದುಕೊಂಡಿದ್ದರು.
ಈ ಟೈಟಲ್‌ನ್ನು ಮೆಜೆಸ್ಟಿಕ್ ನಿರ್ಮಾಪಕ ರಾಮಮೂರ್ತಿ ಸಿನಿಮಾ ಮಾಡಲು ಹೊರಟಿದ್ದರು. ಅದರಲ್ಲಿ ದರ್ಶನ್ ನಾಯಕರಾಗಿದ್ದರು. ಆದರೆ ಅದು ಮಹೇಶ್ ಮಾಡಿಕೊಂಡಿದ್ದ ಕಥೆಗೆ ಸೂಕ್ತವಾಗಿದ್ದ ಕಾರಣ ಅವರು ದರ್ಶನ್ ಮೂಲಕ ರಾಮಮೂರ್ತಿಗೆ ಹೇಳಿಸಿ ಟೈಟಲ್ ಪಡೆದುಕೊಂಡಿದ್ದರು. ಈಗ ಆ ಟೈಟಲ್‌ನ್ನು ಬದಲಾಯಿಸುವ ಬಗ್ಗೆ ಚಿತ್ರತಂಡ ಮಾತನಾಡುತ್ತಿದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
