Connect with us

Cinema News

ಕಿಡಿ ಹೊತ್ತಿಸಿದ ‘ಸ್ಪಾರ್ಕ್’ ಮೊದಲ ಗೀತೆ; ನಿರಂಜನ್-ರಚನಾ ಇಂದರ್‌ ಜೋಡಿಯ ಮಸ್ತ್ ಸ್ಟೆಪ್ಸ್!

Published

on

‘ಶಕಲಕ ಭುಂ ಭೂಮ್..’ ಎಂದು ಆರಂಭವಾಗುವ ‘ಸ್ಪಾರ್ಕ್’ ಚಿತ್ರದ ಮೊದಲ ಗೀತೆ ಅನಾವರಣಗೊಂಡಿದ್ದು, ಸುದ್ದಿಗೋಷ್ಠಿಯ ವೇದಿಕೆಯಲ್ಲೇ ಹಾಡಿನ ಕಿಚ್ಚು ಹೊತ್ತಿಕೊಂಡಿತು. ನಾಯಕ ನಿರಂಜನ್ ಸುಧೀಂದ್ರ ಹಾಗೂ ನಾಯಕಿ ರಚನಾ ಇಂದರ್ ಹೆಜ್ಜೆ ಹಾಕಿರುವ ಈ ಅದ್ಧೂರಿ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಸಂಭ್ರಮಿಸಿತು. ಹಾಡಿನ ಸಂಗೀತ, ಅದ್ದೂರಿ ದೃಶ್ಯಗಳು ಹಾಗೂ ಜೋಡಿಯ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ಪ್ರೇಮ್, ಹಾಡನ್ನು ಹಾಗೂ ನಿರಂಜನ್ ಅವರ ಅಭಿನಯವನ್ನು ಮೆಚ್ಚಿಕೊಂಡರು. ನಿರಂಜನ್ ಕನ್ನಡದ ಪ್ರತಿಭೆಯಾಗಿದ್ದು, ಅವರನ್ನು ಪರಭಾಷೆಯ ಚಿತ್ರರಂಗಗಳು ಸೆಳೆಯುವ ಮುನ್ನ ಕನ್ನಡದ ನಿರ್ಮಾಪಕರು ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಹೇಳಿದರು. ದೊಡ್ಡ ಬಜೆಟ್‌ನಲ್ಲಿ ಯುವ ನಾಯಕನಿಗಾಗಿ ಸಿನಿಮಾ ನಿರ್ಮಿಸಿರುವ ನಿರ್ಮಾಪಕರ ಪ್ರಯತ್ನವನ್ನು ಕೂಡ ಅವರು ಶ್ಲಾಘಿಸಿದರು. ‘ಸ್ಪಾರ್ಕ್’ನಲ್ಲಿ ನಿರಂಜನ್ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡು ನ್ಯಾಯಕ್ಕಾಗಿ ಹೋರಾಡುವ ಯುವಕನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನಾಯಕ ನಿರಂಜನ್ ಮಾತನಾಡಿ, ಈ ಹಾಡನ್ನು ಉಪೇಂದ್ರ ಅವರಿಗೆ ತೋರಿಸಿದಾಗ ದೊಡ್ಡ ಸ್ಟಾರ್‌ಗೆ ಸಿಗುವಂತಹ ಹಾಡು ನಿನಗೆ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು. “ಇದು ನನ್ನ ಅದೃಷ್ಟ. ಸಚಿನ್ ಬಸ್ರೂರು ತುಂಬಾ ಕ್ರಿಯೇಟಿವ್ ಆಗಿ ಸಂಗೀತ ನೀಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಅತಿ ವೇಗವಾಗಿ ಚಿತ್ರೀಕರಣಗೊಂಡ ಸಿನಿಮಾಗಳಲ್ಲಿ ಇದೂ ಒಂದು. ಚಿತ್ರದ ಹಿಂದೆ ಕಾರ್ಪೊರೇಟ್ ನಿರ್ಮಾಪಕರಿರುವುದೇ ಇದಕ್ಕೆ ಪ್ರಮುಖ ಕಾರಣ” ಎಂದರು. ನಾಯಕಿ ರಚನಾ ಇಂದರ್, ಇದು ತಮ್ಮ ಮೊದಲ ಕಮರ್ಷಿಯಲ್ ಸಾಂಗ್ ಆಗಿದ್ದು, ಈ ಹಾಡಿನಲ್ಲಿ ಮೊದಲ ಬಾರಿಗೆ ಇಷ್ಟು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.

ನಿರ್ದೇಶಕ ಮಹಾಂತೇಶ್ ಹಂದ್ರಾಳ್, ‘ಸ್ಪಾರ್ಕ್’ ನಿರ್ಮಾಣದ ಪಯಣ ಸುಮಾರು ಒಂದು ವರ್ಷದದ್ದು. ತಾವು ಕಲ್ಪಿಸಿಕೊಂಡಿದ್ದನ್ನು ತೆರೆ ಮೇಲೆ ಮೂಡಿಸಿರುವ ತೃಪ್ತಿ ಇದೆ ಎಂದು ತಿಳಿಸಿದರು. ಪ್ರೇಮ್ ನೆಗೆಟಿವ್ ಪಾತ್ರವನ್ನು ಒಪ್ಪಿಕೊಂಡು ಚಿತ್ರಕ್ಕೆ ಬೆಂಬಲ ನೀಡಿರುವುದು ತಂಡಕ್ಕೆ ದೊಡ್ಡ ಶಕ್ತಿ ಎಂದರು. ಸಚಿನ್ ಬಸ್ರೂರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಶರಣ್ ಹಾಗೂ ಸಂಗೀತಾ ರವೀಂದ್ರನಾಥ್ ಧ್ವನಿ ನೀಡಿರುವ ಮೊದಲ ಹಾಡನ್ನು ಸಚಿನ್ ಬಸ್ರೂರು ಮತ್ತು ಸಂಗೀತಾ ವೇದಿಕೆಯಲ್ಲಿ ಹಾಡಿ ಸಂಭ್ರಮಿಸಿದರು. ನಿರ್ಮಾಪಕರಾದ ಗರಿಮಾ ಮತ್ತು ಅವಿನಾಶ್ ವಸಿಷ್ಠ, ಲಹರಿ ಸಂಸ್ಥೆಯ ಮನೋಹರ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ‘ಸ್ಪಾರ್ಕ್’ ಸಿನಿಮಾ ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಿಗೆ ಬರಲಿದೆ.

Spread the love

Continue Reading