Television News
ನಾಲ್ಕು ಕೈ, ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ನಟ ಸೋನು ಸೂದ್
ಬಾಲಿವುಡ್ ನಟ ಸೋನು ಸೂದ್ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹಿರೋ ಅನ್ನೋದು ಈಗಾಗ್ಲೆ ಫ್ರೂವ್ ಆಗಿದೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಹಾಯ ಹಸ್ತ ನೀಡಿದ್ದು ಗೊತ್ತೆ ಇದೆ. ಇದೀಗ ಸೋನು ಸೂದ್ ಮತ್ತೊಮ್ಮೆ ನಿಜ ಜೀವನದಲ್ಲೂ ಹಿರೋ ಎನಿಸಿಕೊಂಡಿದ್ದು, ಸೋನು ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರ್ತಿದೆ.
ನಟನಾಗಿ, ಖಳನಟನಾಗಿ, ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಸೋನು ಸೂದ್ ಆನ್ ಸ್ಕ್ರೀನ್ ಜೊತೆಗೆ ಆಫ್ ಸ್ಕ್ರೀನ್ ನಲ್ಲೂ ಹಿರೋ. ಇದೀಗ ಸೋನು ಸೂದ್ ನಾಲ್ಕು ಕೈ, ನಾಲ್ಕು ಕಾಲು ಇರುವ ಪುಟ್ಟ ಮಗುವಿಗೆ ನೆರವಿನ ಹಸ್ತ ಚಾಚಿದ್ದಾರೆ.
ಬಿಹಾರ್ನ ಪುಟ್ಟ ಗ್ರಾಮದ ಹುಡುಗಿ ಚಹುಮುಖಿಯ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದಳು. ಬಾಲಕಿಯ ಪೋಷಕರು ಕಡು ಬಡವರಾಗಿದ್ದು ಮಗುವಿನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ವಿಷಯ ತಿಳಿದ ಸೋನು ಸೂದ್ ಮಗುವಿನ ಚಿಕಿತ್ಸೆಯ ಖರ್ಚನ್ನು ನೋಡಿಕೊಂಡಿದ್ದಾರೆ. ಇದೀಗ ಮಗುವಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿದಿದ್ದು, ಮಗುವಿನ ಆರೋಗ್ಯ ಸುಧಾರಿಸಿದೆ.
ಮಗುವಿನ ಸದ್ಯದ ಸ್ಥಿತಿಯ ಕುರಿತು ಸೋನು ಸೂದ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸೋನು ಸೂದ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸೋನು ಸೂದ್ ಕೆಲಸಕ್ಕೆ ಸಾಕಷ್ಟು ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ.