Connect with us

Cinema News

ಸಿಂಬು ನಟನೆಯ ‘ರಿವೈಂಡ್’ ಶೀರ್ಷಿಕೆ ಬದಲಾವಣೆ

Published

on

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದ ’ರಿವೈಂಡ್’ ಶೀರ್ಷಿಕೆ ಮತ್ತು ಟೀಸರ್‌ನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದರು. ಆದರೆ ಚಂದನವನದಲ್ಲಿ ಇದೇ ಹೆಸರಿನಲ್ಲಿ ಬೇರೊಂದು ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ವಿಷಯವನ್ನು ತಿಳಿದ ತಂಡವು ಈಗ ಬೇರೆ ಟೈಟಲ್ ಇಡಲು ನಿರ್ಧರಿಸಿದೆ. ಎಲ್ಲಾ ಭಾಷೆಗೂ ಅನ್ವಯವಾಗುವಂತ ಹೆಸರನ್ನು ಇಡಲು, ಅದನ್ನು ಸದ್ಯದಲ್ಲೆ ತಿಳಿಸುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ.

ರಚನೆ-ನಿರ್ದೇಶನ ವೆಂಕಟ್‌ಪ್ರಭು, ಸಂಗೀತ ಯುವನ್‌ಶಂಕರ್‌ರಾಜ, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ. ಸುರೇಶ್‌ಕಮತ್‌ಚಿ ಅವರು ’ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ತಾರಗಣದಲ್ಲಿ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *