Cinema News
ಇಷ್ಟಪಟ್ಟಹುಡುಗನ ಜೊತೆ ನಡೆಯಲಿದೆ ಶುಭ ಪೂಂಜಾ ಲೈಫ್ ಲಾಕ್ಡೌನ್
 
																								
												
												
											 
ಮೊಗ್ಗಿನ ಮನಸು ಚಿತ್ರದ ಮೂಲಕ ಚಂದನವನದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಮಾದಕ ಬೆಡಗಿ ಶುಭ ಪೂಂಜಾ ಅವರು ಮದುವೆ ಆಗಲು ತಯಾರಿ ನಡೆಸಿದ್ದಾರೆ.
ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿರುವ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ನಟಿ ಶುಭ ಪೂಂಜಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ಸುಮಾರು ಒಂದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ, ಈ ವರ್ಷಾಂತ್ಯಕ್ಕೆ ಸಪ್ತಪದಿ ತುಳಿಯಲಿದ್ದಾರೆ.
ಇತ್ತೀಚಿಗೆ “ತ್ರಿದೇವಿ” ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದ ನಟಿ ಶುಭ ಪುಂಜ, ಚಂದ,ಮೊಗ್ಗಿನ ಮನಸು, ಕಂಠೀರವ ಮುಂತಾದ ಸಿನಿಮಾಗಳ ಮೂಲಕ ಒಳ್ಳೆ ಹೆಸರು ಗಳಿಸಿದ್ದಾರೆ.
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											