Connect with us

Cinema News

ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಆರ್‌ ಆರ್‌ ಆರ್‌ ಬೆಡಗಿ

Published

on

ಎಲ್ಲಾ ಭಾಷೆಗಳಲ್ಲೂ ಕಬ್ಜ ಸಿನಿಮಾ ಸಖತ್‌ ಸೌಂಡು ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಕೆ ಜಿ ಎಫ್‌ ಸಿನಿಮಾ ಬಳಿಕ ಅದ್ದೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಎಂಬ ಮಾತು ಈಗ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನವಿರುವ ಈ ಸಿನಿಮಾದ ನಾಯಕಿ ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. `ಅವರು ಬರ್ತಾರೆ, ಇವರು ಬರ್ತಾರೆ…’ ಎಂಬ ಗಾಸಿಪ್‌ ಆಗಾಗ ಹರಿದಾಡುತ್ತಲೇ ಇತ್ತು. ಅದಕ್ಕೀಗ ಚಂದ್ರು ಫುಲ್‌ಸ್ಟಾಪ್‌ ಇಟ್ಟಿದ್ದಾರೆ. `ದಕ್ಷಿಣ ಭಾರತದ ಪ್ರಮುಖ ನಾಯಕಿಯರನ್ನೇ ಕರೆತರುತ್ತೇನೆ’ ಎಂದು ಮುಹೂರ್ತದ ಸಂದರ್ಭದಲ್ಲಿ ಹೇಳದ್ದಿರು ಆರ್‌.ಚಂದ್ರು. ಆ ಮಾತನ್ನೀಗ ಉಳಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೀಗ ಮತ್ತಷ್ಟು ಸಂಚಲನ ಮೂಡಿಸಲು ಶ್ರೀಯಾ ಶರಣ್‌ ಆಗಮನವಾಗಿದೆ.

ಕಬ್ಜ ಸಿನಿಮಾದಲ್ಲಿ ಎರಡು ಪ್ರಮುಖ ನಾಯಕಿಯ ಪಾತ್ರವಿದ್ದು, ಆ ಪೈಕಿ ಒಬ್ಬರನ್ನು ರಿವೀಲ್‌ ಮಾಡಿದ್ದಾರೆ ಆರ್‌.ಚಂದ್ರು. ರಾಜಮೌಳಿಯವರ `ಆರ್‌ ಆರ್‌ ಆರ್‌’ ಹಾಗೂ ಅಜಯ್‌ ದೇವಗನ್‌ ಜತೆ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಶ್ರೀಯಾ ಸದ್ಯ ಬಹು ಬೇಡಿಕೆಯ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿರುವ ಅವರು, ಕಬ್ಜ ಸಿನಿಮಾದ ಕಥೆ ಕೇಳಿ ಸಂತೋಷದಿಂದ ಈ ಪ್ರಾಜೆಕ್‌್ಟಗೆ ಸೈನ್‌ ಮಾಡಿದ್ದಾರೆ. ಅವರ ಫಸ್‌್ಟಲುಕ್‌ ಇದೀಗ ರಿವೀಲ್‌ ಆಗಿದ್ದು, ಉಪ್ಪಿಗೆ ಶ್ರೀಯಾ ತಕ್ಕ ಜೋಡಿ ಎಂಬುದು ಪ್ರೇಕ್ಷಕರ ಅನಿಸಿಕೆ.

ಕೆಜಿಎಫ್‌ ಸಿನಿಮಾದ ಬಳಿಕ ಕಬ್ಜ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್‌ ಕ್ರಿಯೇಟ್‌ ಆಗಿದೆ. ಮುಂಬೈನಲ್ಲಿ ಬಹುಬೇಡಿಕೆಯಿರುವ ಈ ಚಿತ್ರ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ. ಮತ್ತಷ್ಟು ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಸಿನಿಪಂಡಿತರ ಅನಿಸಿಕೆ.

ಪ್ಯಾನ್‌ ಇಂಡಿಯಾ ಸಿನಿಮಾ ಎಂದಮೇಲೆ ಸಾಕಷ್ಟು ಸಮಯ ತೆಗೆದುಕೊಳ್ಳೋದು ಸರ್ವೇ ಸಾಮಾನ್ಯ. ಇದೀಗ ಬಿಡುಗಡೆಗೆ ಸಿದ್ಧವಿರುವ ಆರ್‌ ಆರ್‌ ಆರ್‌ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿದೆ. ಹಾಗೆಯೇ ಕೆಜಿಎಫ್‌ ಮೂರು ವರ್ಷಗಳ ಸಮಯ ತೆಗೆದುಕೊಂಡಿದೆ. ಕಬ್ಜ ಕೂಡ ಸತತ ಎರಡು ವರ್ಷಗಳಿಂದ ಶೂಟಿಂಗ್‌ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಸಹ ಸಿನಿಮಾ ಬೇಗ ರಿಲೀಸ್‌ ಮಾಡುವಂತೆ ಒತ್ತಾಯಿಸದ್ದಿರು.

ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ‘ಕಬ್ಜ’ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್‌ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತಿ್ರೕಕರಿಸಲಾಗುತ್ತಿದೆ. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘ಕೆ ಜಿ ಎಫ್‌’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ ಎಂಬುದು ‘ಕಬ್ಜ’ ಹೆಚ್ವುಗಾರಿಕೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ‘ಕಬ್ಜ’ ಕೊನೆಯ ಹಂತದ ಚಿತಿ್ರೕಕರಣ ನಡೆಸುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ ಮೊದಲಾದೆಡೆ ಶೂಟಿಂಗ್‌ ನಡೆಯಲಿದ್ದು, ಇದೇ ವರ್ಷ ಅದ್ದೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಅಣಿಯಾಗಿದೆ ಆರ್.ಚಂದ್ರು ಬಳಗ.

Spread the love

Continue Reading
Click to comment

Leave a Reply

Your email address will not be published. Required fields are marked *