Cinema News
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೊಡುಗೆ.

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೊಡುಗೆ: ರಸ್ತೆಗೆ ಶಿವಣ್ಣನ ಹೆಸರಿಡಲು ಮುಂದಾದ ಫ್ಯಾನ್ಸ್
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರಿಗೆ ನಾಳೆ ಜನ್ಮದಿನದ ಸಂಭ್ರಮ. ಆದರೆ ಪುನೀತ್ ಅಗಲಿಕೆಯ ನೋವಿನಲ್ಲಿರೋ ಶಿವಣ್ಣ ಈ ಬಾರಿ ಹುಟ್ಟುಹಬಕ್ಕೆ ಬ್ರೇಕ್ ಹಾಕಿದ್ದಾರೆ. ಆದರೂ ಶಿವಣ್ಣನ ಅಭಿಮಾನಿಗಳು ಸಾಕಷ್ಟು ವಿಧದಲ್ಲಿ ಅಣ್ಣನ ಬರ್ತಡೇ ಸೆಲೆಬ್ರೇಷನ್ ಮಾಡೋಕೆ ಮುಂದಾಗಿದ್ದಾರೆ.
ಈ ವರ್ಷ ಶಿವರಾಜ್ ಕುಮಾರ್ 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂತಸವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಅಭಿಮಾನಿಗಳು ಬೆಂಗಳೂರಿನ ಮಾನ್ಯತಾ ರೆಸಿಡೆನ್ಸಿಯ ವೃತ್ತವೊಂದಕ್ಕೆ ಶಿವರಾಜ್ ಕುಮಾರ್ ಹೆಸರಿಡಲು ನಿರ್ಧರಿಸಿದ್ದಾರೆ.
ಸಾಕಷ್ಟು ವರ್ಷಗಳಿಂದ ಶಿವರಾಜ್ ಕುಮಾರ್ ಕುಟುಂಬ ಮಾನ್ಯತ ರೆಸಿಡೆನ್ಸಿಯಲ್ಲಿ ವಾಸವಾಗಿದ್ದು ಇಲ್ಲಿನ ಸ್ಥಳಿಯರ ಜೊತೆ ಸ್ನೇಹದಿಂದಿದ್ದಾರೆ. ಇದೇ ಕಾರಣಕ್ಕೆ ಶಿವರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು, ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ರಸ್ತೆಗೆ ಶಿವರಾಜ್ ಕುಮಾರ್ ಹೆಸರಿಡಲು ಮುಂದಾಗಿದ್ದಾರೆ.

Continue Reading