Cinema News
ಸರ್ಜರಿ ಮಾಡಿಸಿಕೊಂಡ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ ಸುಂದರಿ

ಸೌಂದರ್ಯದ ಬಗ್ಗೆ ಕಾಳಜಿ ಇರಬೇಕು, ಆದ್ರೆ ಅದು ಅತಿಯಾದ್ರೆ ಯಾವೆಲ್ಲಾ ಅನಾಹುತಗಳು ನಡೆಯುತ್ತವೆ ಅನ್ನೊದು ಈಗಾಗ್ಲೆ ಗೊತ್ತಿದೆ. ಇತ್ತೀಚೆಗಷ್ಟೇ ನಟಿ ಚೇತನ್ ರಾಜ್ ಸರ್ಜರಿ ಮಾಡಿಸಿಕೊಂಡು ಮೃತಪಟ್ಟಿದ್ದು ಗೊತ್ತೆಇದೆ. ಇದೀಗ ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ತಮ್ಮ 27ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ.
2018ರ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಆಗಿರುವ ಗ್ರೇಸಿ ಕೊರಿಯಾ ಅವರು ಶಸ್ತ್ರಚಿಕಿತ್ಸೆಯ ಬಳಿಕ ಮೃತಪಟ್ಟಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಕಳೆದ ಎರಡು ತಿಂಗಳಿಂದ ಕೋಮಾದಲ್ಲಿದ್ದರು. ಏಪ್ರಿಲ್ 4ರಂದು ಹೃದಯಾಘಾತವಾದ ನಂತರ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ವೈದ್ಯರು ಭಾರೀ ಪ್ರಯತ್ನ ನಡೆಸಿದರು.
ಗ್ಲೇಸಿ ಕೊರಿಯಾಗೆ ಏಪ್ರಿಲ್ 4ರಂದು ಹೃದಯಾಘಾತ ಸಂಭವಿಸಿತು. ನಂತರದ ದಿನಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಗ್ಲೇಸಿ ಕೊರಿಯಾ ಮಾಡೆಲ್ ಹಾಗೂ ಬ್ಯೂಟಿಷಿಯನ್ ಕೂಡ ಆಗಿದ್ದರು. 2018ರಲ್ಲಿ ಕೊರಿಯಾ, ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದಿದ್ದರು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲೂ ಅವರು ಭಾಗಿಯಾಗಿದ್ದರು. ಕಡಿಮೆ ಸಮಯದಲ್ಲೇ ಸೌಂದರ್ಯ ಲೋಕದಲ್ಲಿ ಹೆಸರು ಮಾಡಿದ್ದರು. ಇನ್ ಸ್ಟಾಗ್ರಾಮ್ ನಲ್ಲಿ 56,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಸಾವಿಗೆ ಸಂತಾಪ ಸೂಚಿಸಿದ್ದಾರೆ.
