Cinema News
ಕರ್ನಾಟಕದ ನಂಬರ್ 1 ಶ್ರೀಮಂತ ಶರತ್ ಕುಮಾರ್
ತಮಿಳು ಚಿತ್ರರಂಗದ ಖ್ಯಾತ ನಟ ಶರತ್‌ಕುಮಾರ್ ರಾಜಕುಮಾರ ಸಿನಿಮಾದ ನಂತರ ಕನ್ನಡದ ರೆಮೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರೋಗ್ ಖ್ಯಾತಿಯ ನಟ ಇಶಾನ್ ನಟಿಸುತ್ತಿದ್ದಾರೆ. ರೆಮೋದಲ್ಲಿ ಇಶಾನ್ ಅವರ ತಂದೆಯ ಪಾತ್ರದಲ್ಲಿ ಶರತ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.
ಶರತ್‌ಕುಮಾರ್ ಕರ್ನಾಟಕದ ನಂ.1 ಶ್ರೀಮಂತ ಮತ್ತು ಹೆಸರಾಂತ ಉದ್ಯಮಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಐಶಾರಾಮಿ ಸೆಟ್ ಹಾಕಿದ್ದು, ಅದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆಶಿಕಾ ರಂಗನಾಥ್ ಇಶಾನ್‌ಗೆ ಜೋಡಿಯಾಗಿ ಈ ಚಿತ್ರದಲ್ಲಿದ್ದಾರೆ.