Cinema News
‘ಅಧೀರ’ನ ಪಾತ್ರ ಮಾಡಲು ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಯಶ್ ನಟನೆಯ ಕೆಜಿಎಫ್ ಸಿನಿಮಾ ದಲ್ಲಿ ಸಂಜಯ್ ದತ್ ನಟಿಸುತ್ತಾರೆ ಎಂಬ ಸುದ್ದಿಗಳು ಜೋರಾಗಿ ಹಬ್ಬಿತ್ತು. ಆದರೆ ಚಿತ್ರತಂಡ ಮಾತ್ರ ಇದಕ್ಕೆ ಸಂಬಂಧಿಸದಂತೆ ಯಾವುದನ್ನು ಹೇಳಿರಲಿಲ್ಲ. ಈಗ ಕೆಜಿಎಫ್-2ದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದು, ಅದರ ಫಸ್ಟ್ ಲುಕ್‌ನ್ನು ಸ್ವತಃ ಚಿತ್ರತಂಡ ರಿವೀಲ್ ಮಾಡಿದೆ.
ಕೆಜಿಎಫ್ ಭಾಗ -1ರಲ್ಲಿ ಅಧೀರ ಪಾತ್ರವನ್ನು ಬರೀ ಹಿಂದಿನಿಂದ ತೋರಿಸಲಾಗಿತ್ತು. ಭಾಗ ಎರಡರಲ್ಲಿ ಅಧೀರನೇ ಮುಖ್ಯ ವಿಲನ್ ಆಗಿದ್ದು, ಅದನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲವೂ ಇತ್ತು. ಈಗ ಅದು ನಿವಾರಣೆಯಾಗಿದ್ದು, ಸಂಜಯ್ ದತ್ ನಟಿಸುತ್ತಿದ್ದು, ಆ ಲುಕ್ ಕೂಡಾ ವಿಭಿನ್ನವಾಗಿದೆ. ಜತೆಗೆ ಈ ಪಾತ್ರಕ್ಕಾಗಿ ಸಂಜಯ್ ದತ್‌ಗೆ 10 ಕೋಟಿ ಹಣವನ್ನು ಸಂಭಾವನೆ ರೂಪದಲ್ಲಿ ನೀಡಿದ್ದಾರಂತೆ. ಜತೆಗೆ ಅವರು ಬರುವ ಹೋಗುವ ಖರ್ಚು ವೆಚ್ಚ ಎಲ್ಲವೂ ಸೇರಿ ಅವರೊಬ್ಬರದ್ದೇ ಹತ್ತಿರ ಹತ್ತಿರ 12 ಕೋಟಿಯಷ್ಟಾಗುತ್ತದೆ. ಆದರೆ ಸ್ಕ್ರಿಪ್ಟ್ ಅಂತಹ ನಟರನ್ನು ಬೇಡಿತ್ತು ಎನ್ನುತ್ತಿದೆ ಚಿತ್ರತಂಡ.
ಒಟ್ಟಿನಲ್ಲಿ ಕನ್ನಡದ ಎರಡು ಸಿನಿಮಾಗಳಾಗುವ ಬಜೆಟ್‌ನ್ನು ಒಬ್ಬ ನಟನಿಗೆ ಸಂಭಾವನೆಯಾಗಿ ನೀಡಿರುವುದು ಗಾಂಧಿನಗರದ ಮಂದಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.