Connect with us

Cinema News

ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಿದ ‘ಸಂಭ್ರಮದ ರುಚಿ ಒಂದೇ’ ಹಾಡು ಬಿಡುಗಡೆ!

Published

on

ಭಾರತದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಿಹಿಯ ಮೂಲಕ ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ರೂಪುಗೊಂಡಿರುವ ‘ಸಂಭ್ರಮದ ರುಚಿ ಒಂದೇ’ ಆಲ್ಬಮ್ ಹಾಡು ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಸಿಹಿಕಹಿ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಗೀತೆಯನ್ನು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತಪಡಿಸಿದೆ. ದೇಶದ ವೈವಿಧ್ಯಮಯ ಹಬ್ಬಗಳು, ಸಾಂಸ್ಕೃತಿಕ ಪರಂಪರೆ ಹಾಗೂ ಸಿಹಿ ಹಂಚಿಕೊಳ್ಳುವ ಸಂಭ್ರಮವನ್ನು ಹಲವು ಭಾಷೆಗಳ ಮೂಲಕ ಕಟ್ಟಿಕೊಟ್ಟಿರುವುದು ಈ ಹಾಡಿನ ವಿಶೇಷತೆ. ಹಿರಿಯ ನಟ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ರವಿಶಂಕರ್, ಸುಧಾರಾಣಿ ಸೇರಿದಂತೆ ಹಲವು ಗಣ್ಯರು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಿಹಿಕಹಿ ಚಂದ್ರು, ಭಾರತೀಯರ ಭಾಷೆ, ಆಚರಣೆ ಹಾಗೂ ಸಂಸ್ಕೃತಿಗಳು ವಿಭಿನ್ನವಾಗಿದ್ದರೂ ಸಿಹಿಯ ಮೂಲಕ ಎಲ್ಲರನ್ನೂ ಒಗ್ಗೂಡಿಸಬಹುದು ಎಂಬ ಆಶಯ ಈ ಹಾಡಿನ ಹಿಂದಿದೆ ಎಂದು ತಿಳಿಸಿದರು. ಪ್ರವೀಣ್ ಡಿ. ರಾವ್ ಅವರ ಸಂಗೀತ ಸಂಯೋಜನೆ ಮತ್ತು ಕವಿರಾಜ್ ಅವರ ಸಾಹಿತ್ಯ ಹಾಡಿಗೆ ವಿಶೇಷ ಮೆರುಗು ನೀಡಿದೆ. ಶ್ವೇತಾ ರಾಜಶೇಖರ್, ವಿಶ್ವನಾಥ್ ಮೂರ್ತಿ ಹಾಗೂ ತಮ್ಮ ಸಹಯೋಗದಲ್ಲಿ ಈ ಪ್ರಯತ್ನ ಸಾಕಾರಗೊಂಡಿದ್ದು, ಹಾಡನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ಧನು ಕುಮಾರ್ ಅವರ ನೃತ್ಯ ಸಂಯೋಜನೆ ಹಾಗೂ ಸುರೇಶ್ ಅರಸ್ ಅವರ ಸಂಕಲನ ಹಾಡಿನ ತಾಂತ್ರಿಕ ತಂಡದಲ್ಲಿವೆ.

‘ಇಂಡಿಯಾ ಸ್ವೀಟ್ ಹೌಸ್’ ಮುಖ್ಯಸ್ಥ ವಿಶ್ವನಾಥ್ ಮೂರ್ತಿ ಮಾತನಾಡಿ, ಇಂತಹ ವಿಭಿನ್ನ ಪ್ರಯತ್ನವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದು, ಚಿತ್ರೀಕರಣದ ವೇಳೆ ಸಿಹಿಕಹಿ ಚಂದ್ರು ಅವರೊಂದಿಗೆ ಕಳೆದ ಮೂರು ದಿನಗಳು ಸಂತಸದ ಅನುಭವ ನೀಡಿದವು ಎಂದು ಹಂಚಿಕೊಂಡರು. ಭರತನಾಟ್ಯ ಕಲಾವಿದೆ ಹಾಗೂ ಇಂಡಿಯಾ ಸ್ವೀಟ್ ಹೌಸ್ ಪಾಲುದಾರೆ ಶ್ವೇತಾ ರಾಜಶೇಖರ್ ಮಾತನಾಡಿ, ಜನರ ಮನಸ್ಸಿನಲ್ಲಿ ಸದಾ ಉಳಿಯುವಂತಹ ಸೃಜನಾತ್ಮಕ ಪ್ರಯತ್ನ ಮಾಡಬೇಕೆಂಬ ಆಲೋಚನೆಯಿಂದ ಈ ಹಾಡು ರೂಪುಗೊಂಡಿತು ಎಂದರು. ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ಎಲ್ಲರಿಗೂ ತಲುಪುವ ಪ್ರಯತ್ನ ಇದಾಗಿದ್ದು, ಕೇವಲ ಜಾಹೀರಾತಿಗಾಗಿ ಅಲ್ಲದೆ ಪ್ರತಿ ಹಬ್ಬದ ಸಂಭ್ರಮದಲ್ಲಿ ಜನರು ಸಂಭ್ರಮಿಸಲಿ ಎಂಬ ಉದ್ದೇಶದಿಂದ ಹಾಡನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಈ ಗೀತೆಯನ್ನು ಇಂಡಿಯಾ ಸ್ವೀಟ್ ಹೌಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಸುಧಾರಾಣಿ, ಸಿಹಿಯ ಜಗತ್ತಿನಲ್ಲಿ ಇಂತಹ ವಿಭಿನ್ನ ಸೃಜನಶೀಲ ಪ್ರಯತ್ನ ಹೊಸತನದಿಂದ ಕೂಡಿದ್ದು, ಅದರ ಭಾಗವಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಸಮಾರಂಭದಲ್ಲಿ ಸಾಹಿತಿ ಕವಿರಾಜ್, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್, ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಹಾಗೂ ಇಂಡಿಯಾ ಸ್ವೀಟ್ ಹೌಸ್‌ನ ರಾಜೇಶ್ ಮೆಹ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಕುಲ್ ಅಭಯಂಕರ್, ಅಂಕಿತಾ ಕುಂಡು, ವಾರಿಜಾಶ್ರೀ, ಫಯಾಜ್ ಖಾನ್ ಮತ್ತು ದೀಪ್ತಿ ಭಟ್ ಅವರ ಗಾಯನದಲ್ಲಿ ಮೂಡಿಬಂದಿರುವ ‘ಸಂಭ್ರಮದ ರುಚಿ ಒಂದೇ’ ಹಾಡು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಿಹಿಯ ಮೂಲಕ ಸಂಭ್ರಮಿಸುವ ವಿಶಿಷ್ಟ ಸಂಗೀತ ಪ್ರಯತ್ನವಾಗಿ ಗಮನ ಸೆಳೆಯುತ್ತಿದೆ.

Spread the love

Continue Reading