News

ಡಿ.17ಕ್ಕೆ ಬೆಂಗಳೂರಿಗೆ ಬರಲಿರೋ ಸಲ್ಲು – ಕಿಚ್ಚ

Published

on

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ ಇದೇ 17ಕ್ಕೆ ಬೆಂಗಳೂರಿಗೆ ತಮ್ಮ ದಬಾಂಗ್‌-3 ತಂಡದ ಜತೆ ಬರಲಿದ್ದಾರೆ.

 

 

ಡಿ.20ಕ್ಕೆ ದಬಾಂಗ್‌ ರಿಲೀಸ್ ಆಗಲಿದ್ದು, ಅದರ ಪ್ರಮೋಶನ್‌ ಜತೆಗೆ ಬೆಂಗಳೂರಿನ ಜನರ ಜತೆ ಮಾತನಾಡಲು ಅವರು ಬರುತ್ತಿದ್ದಾರೆ. ಸುದೀಪ್‌ ಈ ಚಿತ್ರದಲ್ಲಿ ಮುಖ್ಯ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಲ್ಲು ಬೆಂಗಳೂರಿಗೆ ಬರಲು ಮತ್ತೊಂದು ಕಾರಣವಾಗಿದೆ.

 

 

17ರಂದು ಬೆಂಗಳೂರಿಗೆ ಬರುವ ಸಲ್ಲು, ಶಾಪಿಂಗ್‌ ಮಾಲ್‌ ಒಂದರಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾರೆ. ಇವರ ಜತೆಗೆ ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್‌, ಪ್ರಭುದೇವ ಸಹ ಇರಲಿದ್ದಾರೆ. ದಬಾಂಗ್‌-3 ಕನ್ನಡದಲ್ಲಿ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ಸಲ್ಮಾನ್‌ ಬಂದರೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಮೈಲೇಜ್‌ ಸಿಗಲಿದೆ ಎನ್ನಲಾಗುತ್ತಿದೆ.

 

 

ಟೀಸರ್‌ ರಿಲೀಸ್‌ ಆದಾಗಿನಿಂದಲೂ ಕನ್ನಡದ ಬಗ್ಗೆ ಸಲ್ಲು ಸಿಕ್ಕಾಪಟ್ಟೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆಯಷ್ಟೆ ಬಿಗ್‌ ಬಾಸ್‌ನಲ್ಲಿ ಮುಂಬೈನಿಂದ ನೇರ ಮಾತುಕತೆಯಲ್ಲಿಯೂ ಕನ್ನಡ ಪದಗಳನ್ನು ಕೇಳಿ ಮಾತನಾಡಿದರು. ಇನ್ನು ಈ ಚಿತ್ರ ಸೂಪರ್‌ ಡ್ಯೂಪರ್‌ ಹಿಟ್‌ ಆಗಲಿದೆಯಂತೆ. ಕನ್ನಡಕ್ಕೆ ಗುರುದತ್‌ ಗಾಣಿಗ ಸಂಭಾಷಣೆ ಬರೆದಿದ್ದಾರೆ,

Spread the love
Click to comment

Copyright © 2019 PopcornKannada.com