Connect with us

Cinema News

ಸಿಧುಗೆ ಬಂದ ಗತಿಯೇ ಸಲ್ಮಾನ್ ಖಾನ್ ಗೂ ಬರುತ್ತೆ: ಆತಂಕ ತಂದಿಟ್ಟ ಅನಾಮಧೇಯ ಪತ್ರ

Published

on

ಖ್ಯಾತ ಗಾಯಕ ಸಿಧು ಮೂಸೆವಾಲಾ ಮೇಲೆ ಗುಂಡಿನ ದಾಳಿ ನಡೆದು ವಾರ ಕಳೆದಿದ್ರು ಇಂದಿಗೂ ಅಲ್ಲಿನ ಜನ ಘಟನೆಯನ್ನ ನೆನೆದು ಬೆಚ್ಚಿ ಬೀಳ್ತಿದ್ದಾರೆ. ಬರೋಬ್ಬರಿ 20 ಸುತ್ತುಗಳ ಫೈರಂಗ್ ನಡೆಸಿ ಸಿಧು ಮೂಸೆವಾಲಾರನ್ನ ಗಂಭೀರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೊಂದು ಡೆತ್ ಥ್ರೆಟ್ ದೇಶದಲ್ಲಿ ತಲ್ಲಣ ಮೂಡಿಸಿದೆ. ಅಂದ್ಹಾಗೆ ಈ ಬಾರಿ ಹಂತಕರು ಗುರಿಯಾಗಿಸಿರೋದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರನ್ನ.
ಬಾಲಿವುಡ್ ನ ಬಹು ಬೇಡಿಕೆಯ ನಟ ಸಲ್ಮಾನ್ ಖಾನ್. ಅಂದ್ಹಾಗೆ ಇತ್ತೀಚೆಗೆ ಸಲ್ಮಾನ್ ನಟಿಸ್ತಿರೋ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಆದ್ರೆ ಬಾಲಿವುಡ್ ಚಿತ್ರದಲ್ಲಿ ಸಲ್ಲುಗಿರೋ ಡಿಮ್ಯಾಂಡ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಈ ನಡುವೆ ಸಲ್ಮಾನ್ ಖಾನ್ ಗೆ ಜೀವ ಬೆದರಿಗೆ ಎದುರಾಗಿದ್ದು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.
ಸಲ್ಮಾನ್ ಖಾನ್ ಜೊತೆಗೆ ಸಲ್ಲು ತಂದೆ ಸಲೀಂ ಖಾನ್ ಗೂ ಜೀವ ಬೆದರಿಕೆ ಹಾಕಲಾಗಿದೆ. ಸಲೀಂ ಖಾನ್ ವಾಕಿಂಗ್ ಮಾಡುವ ವೇಳೆ ಕುಳಿತುಕೊಳ್ಳುವ ಸ್ಥಳದಲ್ಲಿ ಅನಾಮಧೇಯ ಪತ್ರವೊಂದು ಸಿಕ್ಕಿದ್ದು ಭದ್ರತಾ ಸಿಬ್ಬಂದಿ ಅದನ್ನ ಪರಿಶೀಲನೆ ನಡೆಸಿದ್ದಾರೆ. ಪತ್ರದಲ್ಲಿ ಸಲ್ಮಾನ್ ಹಾಗೂ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗ್ತಿದೆ.
ಈ ಕುರಿತು ಸಲ್ಮಾನ್ ಖಾನ್ ಕುಟುಂಬದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಜೊತೆಗೆ ಸಿಧು ಮೂಸೆವಾಲಾ ಹತ್ಯೆಯಾಗಿ ವಾರ ಕಳೆಯುವಷ್ಟರಲ್ಲೇ ಸಲ್ಮಾನ್ ಗೆ ಜೀವ ಬೆದರಿಗೆ ಪತ್ರ ಬಂದಿರೋದ್ರಿಂದ ಪೊಲೀಸರು ಸಲ್ಮಾನ್ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಜೊತೆಗೆ ಪತ್ರ ಬರೆದಿದ್ದು ಯಾರು ಅನ್ನೋ ಹುಡುಕಾಟದಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *