Connect with us

Cinema News

ಸಹ್ಯಾದ್ರಿ Film Title Launch

Published

on

2023ರಲ್ಲಿ‌ ತೆರೆಕಂಡ ಆರ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದ ನಟ ನಿರ್ದೇಶಕ ಬರಹಗಾರ  ಆರ ರೋಹಿತ್ ಹಳೇ ಅನುಭವದ ಜೊತೆಗೆ ಹೊಸ ಕನಸನ್ನೊತ್ತು  ಎರಡನೇ ಚಿತ್ರವನ್ನ ಅನೌನ್ಸ್ ಮಾಡಿದ್ದು, ಚಿತ್ರಕ್ಕೆ ‘ಸಹ್ಯಾದ್ರಿ’ ಅಂತ ಹೆಸರಿಟ್ಟಿದ್ದಾರೆ. ದೈವ ಹಾಗೂ ದುಷ್ಟ ಶಕ್ತಿಯ ನಡುವಿನ ಸಂಘರ್ಷವನ್ನ ಆಧರಿಸಿ  ಆರ ಮಾಡಿದ್ದ ರೋಹಿತ್  ಈ ಬಾರಿ, ಇನ್ನೊಂದು ಕೌತುಕ ವಿಚಾರವನ್ನ ಹೇಳಲು ಹೊರಟ್ಟಿದ್ದಾರೆ.

ಸಹ್ಯಾದ್ರಿ ಪಂಚ ಭಾಷೆಯಲ್ಲಿ ಬರಲಿದ್ದು, ಟೈಟಲ್ ಟೀಸರ್ ಮೂಲಕ  ಇದು ಪ್ಯಾನ್ ಇಂಡಿಯಾ ಸಿನ್ಮಾ ಅನ್ನೋದನ್ನ ಸೂಚಿಸಿದ್ದಾರೆ. ಹೌದು, ಸಹ್ಯಾದ್ರಿ ಚಿತ್ರದ ಕಥಾಹಂದರ
ಆಧ್ಯಾತ್ಮಿಕ ದರೋಡೆಕೋರ ಪ್ರಕಾರವಾಗಿದ್ದು, ಮೆದುಳಿನಲ್ಲಿ ಹೆಚ್ಚಿನ ನರಕೋಶಗಳನ್ನು ಹೊಂದಿರುವ ಅಕಾಲಿಕ ಮಗು ವಯಸ್ಸಾದಂತೆ, ಎಲ್ಲಾ ಶಕ್ತಿಯನ್ನು ತಡೆಹಿಡಿಯುವ ವಿಜಯಶಾಲಿಯಾಗುತ್ತದೆ. ಈ ಲೈನ್ ಇಟ್ಟುಕೊಂಡು  ಈ ಸಲ ರೋಹಿತ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಆರ ಚಿತ್ರದ ಮೂಲಕ ಸಿನಿಮಾದ ವ್ಯಾಪಾರ ವ್ಯವಹಾರವನ್ನ ಸಂಪೂರ್ಣವಾಗಿ ಅರಿತುಕೊಂಡಿರುವ ರೋಹಿತ್ ಮತ್ತು ತಂಡ 2ವರ್ಷಗಳಿಂದ ಎರಡನೇ ಸಿನಿಮಾ ಯೋಜನೆಯನ್ನ ಅಚ್ಚುಕಟ್ಟಾಗಿ ರೂಪಿಸಿದ್ದು, ಈ ಬಾರಿ ಗೆದ್ದೇ ಗೆಲ್ಲುವ ದೊಡ್ಡದಾಗಿ ನಿಲ್ಲುವ ಛಲದಲ್ಲಿ ಸಹ್ಯಾದ್ರಿಯನ್ನ ರೂಪಿಸುವ ಪ್ರಯತ್ನ ಮಾಡ್ತಿದೆ. ಮೊದಲಿಗೆ ಸಹ್ಯಾದ್ರಿ ಚಿತ್ರವನ್ನ ಕನ್ನಡದಲ್ಲಿ ಚಿತ್ರಿಸಿ ನಂತರ ಇತರ ಭಾಷೆಗಳಿಗೆ ಡಬ್ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.

ಸದ್ಯದಕ್ಕೆ ವಿಭಿನ್ನವಾಗಿ ಅಪ್ಪಟ ಕನ್ನಡದ ಸೊಗಡಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿ ನಿಂತು ಶೀರ್ಷಕೆ ಅನಾವರಣ ಮಾಡಿರೋ ಆರ ರೋಹಿತ್ , ಸದ್ಯದಲ್ಲೇ ಚಿತ್ರದ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸುವ ಕೆಲಸದಲ್ಲಿದ್ದಾರೆ. ಮಂಗಳೂರು ಸೇರಿದಂತೆ ಬಹುತೇಕ ಪಶ್ಚಿಮ ಘಟ್ಟಗಳಲ್ಲೇ ಸಹ್ಯಾದ್ರಿ ಚಿತ್ರದ ಚಿತ್ರೀಕರಣ ನಡೆಯಲಿದೆಯಂತೆ.. ಎಲ್ಲಾ ಅಂದುಕೊಂಡಂತೆ ಆದ್ರೆ ಈ ಸಹ್ಯಾದ್ರಿ‌ 2026ರ ಜುಲೈನಲ್ಲಿ ತೆರೆಗೆ ಬರಲಿದೆಯಂತೆ. ಸಹ್ಯಾದ್ರಿ ಎಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ  ರೇಣುಕಾ ಪಿ ಎನ್ ನಿರ್ಮಿಸ್ತಿದ್ದಾರೆ.ಆರ ರೋಹಿತ್ ಈ ಚಿತ್ರವನ್ನ ಬರೆದು ನಿರ್ದೇಶಿಸಿ,ನಟಿಸ್ತಿದ್ದಾರೆ. ವಿಲಿಯಲ್ ಡೇವಿಡ್ ಸಹಾಯಕ  ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಮಾಡ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಹಾಯಕ
ನವನಾಥ್ ವಾಸುದೇವ್ ಸಂಗೀತ ಸಂಯೋಜಿಸ್ತಿದ್ದಾರೆ.

ತಾಂತ್ರಿಕವಾಗಿ ನಿಪುಣರ ತಂಡ ಕಟ್ಟಿಕೊಂಡಿರುವ ರೋಹಿತ್ ಪ್ರಸ್ತುತ ಉದ್ಯಮದ ಸ್ಥಿಗತಿಯನ್ನ ಅಧ್ಯಾಯನ ಮಾಡಿ ಸಹ್ಯಾದ್ರಿ ಚಿತ್ರವನ್ನ ಮಾಡೋದಕ್ಕೆ ಕೈ ಹಾಕಿದ್ದು, ಈ ತಂಡದ ನಡೆ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *