Cinema News
ಸಾಧು ಕೋಕಿಲ ಅವರ ಕನಸಿನ ಸ್ಟುಡಿಯೋ ಆರಂಭ

ಹಾಸ್ಯ ನಟರಾಗಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಸಾಧುಕೋಕಿಲಾ ಬೆಂಗಳೂರಿನ ನಾಗರಭಾವಿಯಲ್ಲಿ ಲೂಪ್ ಹೆಸರಿನ ಸ್ಟುಡಿಯೋವನ್ನು ತೆರೆದಿದ್ದಾರೆ. ಇದಕ್ಕೆ ಇತ್ತೀಚೆಗೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಚಾಲನೆ ನೀಡಿದರು.

ಈ ಸ್ಟುಡಿಯೋವನ್ನು ಸಾಧು ಪುತ್ರ ಸುರಾಗ್ ನೋಡಿಕೊಳ್ಳಲಿದ್ದು, ಇದರಲ್ಲಿ ವಿಎಫ್‌ಎಕ್ಸ್, ಡಬ್ಬಿಂಗ್, ಮಿಕ್ಸಿಂಗ್, ಮಾಸ್ಟರಿಂಗ್, ಡಿಟಿಎಸ್ ಮಿಕ್ಸ್, ಎಡಿಟಿಂಗ್, ಮತ್ತು ಕಲರ್ ಗ್ರೇಡಿಂಗ್ ಸೌಲಭ್ಯವಿದೆ. ಒಂದು ಸಿನಿಮಾಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಸ್ಟುಡಿಯೋದಲ್ಲಿ ಮಾಡಲಾಗುತ್ತದಂತೆ.
ಇನ್ನು ಸ್ಟುಡಿಯೋ ಉದ್ಘಾಟಿಸಿ ಮಾತನಾಡಿದ ಎಸ್ ಪಿ ಬಾಲಸುಬ್ರಹ್ಮಣ್ಯಂ, ಸಾಧುಕೋಕಿಲಾ ಸಂಗೀತ ನೀಡಿದ ಎಷ್ಟೋ ಸಿನಿಮಾಗಳಲ್ಲಿ ನಾನು ಹಾಡಿದ್ದೇನೆ. ಹಾಗಾಗಿ ಸಾಧು ನನಗೆ ಗುರು ಸಮಾನರು ಎಂದು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಸಾಧುಕೋಕಿಲಾ ಸಹ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದಾರಂತೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸ್ಟುಡಿಯೋ ಈಗ ಲೂಪ್ ಮೂಲಕ ಸಿಗುವಂತಾಗಿದೆ.
