Cinema News
‘ರುಸ್ತುಂ’ಗಾಗಿ ಕಾಯುತ್ತಿದೆ ಬಾಲಿವುಡ್

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾ ಇದೇ 28ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾಗೆ ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಡ್ ಕೂಡಾ ಕಾಯುತ್ತಿದೆ.

ಹೌದು, ‘ರುಸ್ತುಂ’ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾ. ಇವರು ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗಳಲ್ಲಿ ಸ್ಟಾರ್ ನಟರಿಗೆ ಆ್ಯಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಹಾಗಾಗಿ ಎಲ್ಲ ಸ್ಟಾರ್‌ಗಳ ಜತೆಯೂ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇವರಿಗೆಲ್ಲ ರವಿವರ್ಮಾ ಸಿನಿಮಾ ತೋರಿಸಲು ಪ್ಲಾನ್ ಮಾಡಿಕೊಂಡಿದ್ದಾರಂತೆ.

ರವಿವರ್ಮಾ ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ , ಅಜಯ್ ದೇವಗನ್, ತೆಲುಗಿನ ನಾಗಾರ್ಜುನ ಜತೆ ಮಾತನಾಡಿದ್ದು, ಅವರೆಲ್ಲರೂ ರುಸ್ತುಂ ನೋಡುವುದಾಗಿ ಹೇಳಿದ್ದಾರಂತೆ. ಈ ಮೇಲಿನ ಎಲ್ಲ ನಟರ ಬಿಡುವಿನ ದಿನಾಂಕವನ್ನು ನೋಡಿಕೊಂಡು ಮುಂಬಯಿಯಲ್ಲಿ ಅವರು ಶೋ ಆರ್ಗನೈಸ್ ಮಾಡುತ್ತಾರಂತೆ.
ಚಿತ್ರವನ್ನು ಜಯಣ್ಣ – ಭೋಗೇಂದ್ರ ನಿರ್ಮಾಣ ಮಾಡಿದ್ದು, ಚಿತ್ರವನ್ನು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

