Cinema News

ದೇಶದಾದ್ಯಂತ ಹವಾ ಎಬ್ಬಿಸಿದ ರಾಖಿ ಭಾಯ್ ಹೊಸ ಲುಕ್

Published

on

ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಮುಂದಿನ ವರ್ಷದ ಬಹು ನಿರೀಕ್ಷಿತ ಸಿನಿಮಾ “ಕೆಜಿಎಫ್ ಚಾಪ್ಟರ್ 2” ಫರ್ಸ್ಟ್ ಲುಕ್ ಪೋಸ್ಟರ್ ಇಂದು ಸಂಜೆ 5.45 ಗಂಟೆಗೆ ಬಿಡುಗಡೆಯಾಗಿದೆ.

“Rebuilding an Empire” ಎಂಬ ಅಡಿಬರಹದೊಂದಿಗೆ ಬಂದಿರುವ ಈ ಪೋಸ್ಟರ್ ಸಿನಿಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದೆ. ಯಶ್ ಅಭಿಮಾನಿಗಳಂತೂ ಫೇಸ್ಬುಕ್, ಟ್ವಿಟ್ಟರ್, ವ್ಹಾಟ್ಸಪ್ಪ್ ಎಲ್ಲಾ ಕಡೆ ಪೋಸ್ಟರ್ ಹರಿಬಿಡುತ್ತಿದ್ದಾರೆ.

 

 

ಅದು ಅಷ್ಟಕ್ಕೇ ನಿಂತಿಲ್ಲ, 5 ಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ದೇಶದಾದ್ಯಂತ ಎಲ್ಲಾ ಸಿನಿಮಾ ಪತ್ರಕರ್ತರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ. ಇದರ ಪರಿಣಾಮ, ಟ್ವಿಯರ್ ಇಂಡಿಯಾದಲ್ಲಿ ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗಿದ್ದು, ಕೇವಲ 2 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟರ್ ಬಗ್ಗೆ ಟ್ವೀಟ್ಸ್ ಮಾಡಿದ್ದಾರೆ.

ಸದ್ಯ ಶೂಟಿಂಗ್‌ನಲ್ಲಿರುವ ಚಿತ್ರತಂಡ, ಬೇಸಿಗೆ ರಜೆಯ ಸಮಯದಲ್ಲಿ ಚಿತ್ರವನ್ನು ತೆರೆಗೆ ತರಲು ಶ್ರಮಿಸುತ್ತಿದ್ದಾರೆ.

Spread the love
Click to comment

Copyright © 2019 PopcornKannada.com