Cinema News

ನನ್ನ ಮಗಳು ಸಾಧನೆ ಮಾಡಿದ್ರೆ ಮಾತ್ರ ಮರ್ಯಾದೆ ಕೊಡಿ

Published

on

ಯಶ್‌ ಇತ್ತೀಚಿನ ದಿನಗಳಲ್ಲಿ ಏನೇ ಮಾಡಿದ್ರು ಸುದ್ದಿಯಾಗುತ್ತಿದೆ. ಅದು ಅವರ ಮಕ್ಕಳ ವಿಚಾರದಲ್ಲಿಯೂ ಹೌದು, ಇತ್ತೀಚೆಗೆ ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಅವರು ನನ್ನ ಮಗಳು ಸಾಧನೆ ಮಾಡಿದ್ರೆ ಮಾತ್ರ ಅವಳಿಗೆ ಗೌರವ ನೀಡಿ ಎಂದು ಹೇಳಿದ್ದಾರೆ.

 

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಯಶ್‌ ಅತಿಥಿಯಾಗಿದ್ದರು. ಅಲ್ಲಿ ಪುತ್ರಿ ಐರಾ ಬಗ್ಗೆ ಕೇಳಿದಾಗ. ಎಲ್ಲಾದರೂ ಹೋದರೆ ಮಕ್ಕಳ ಬಗ್ಗೆ ಕೇಳುತ್ತಾರೆ. ಕೆಲವರು ಐರಾಳನ್ನು ನೋಡಲು ಮನೆಗೆ ಬರುತ್ತಾರೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು, ತಕ್ಷಣ ಅಲ್ಲಿದ್ದ ಕೆಲವರು ಐರಾ ಐರಾ ಎಂದು ಕೂಗಲು ಆರಂಭಿಸಿದರು ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡಿದ ಯಶ್‌ ಲೈಫ್‌ನಲ್ಲಿ ಯಾವತ್ತೂ ಇಂತಹ ತಪ್ಪು ಮಾಡಬೇಡಿ. ಅವರಾಗಿಯೇ ಏನಾದರೂ ಸಾಧಿಸಿದರೆ ಗೌರವ ಕೊಡಿ. ಯಾರದ್ದೋ ಮಕ್ಕಳು ಅಂತ ಯಾವತ್ತೂ ಗೌರವ ಕೊಡಬೇಡಿ. ಅವರೇನು ಕೆಲಸ ಮಾಡ್ತಾರೆ ಅಂತ ನೋಡಿ ಗೌರವ ಕೊಡಿ. ಎಂದು ಹೇಳಿದರು ಜತೆಗೆ ಅವಳಿಗೆ ನಿಮ್ಮ ಪ್ರೀತಿ ಅವಶ್ಯಕ ಎಂದು ಸಹ ಹೇಳಿದರು.

Spread the love
Click to comment

Copyright © 2019 PopcornKannada.com