Cinema News
ತಂದೆ, ತಾಯಿ ಮದುವೆ ದಿನ ಮರೆತ ರಶ್ಮಿಕಾ ಮಂದಣ್ಣ: ತಡವಾಗಿ ವಿಶ್ ಮಾಡಿ ಟ್ರೋಲ್ ಆದ ನಟಿ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದು ಹೊಸದೇನು ಅಲ್ಲ. ನಿತ್ಯ ಒಂದಲ್ಲ ಒಂದು ವಿಷಯಕ್ಕೆ ರಶ್ಮಿಕಾ ಟ್ರೋಲ್ ಆಗುತ್ತಲೆ ಇರುತ್ತಾರೆ. ಆದ್ರೆ ಇದ್ಯಾವುದಕ್ಕೂ ಕಿರಿಕ್ ಹುಡುಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದೀಗ ರಶ್ಮಿಕಾ ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹಲವು ನಟರ ಹುಟ್ಟುಹಬ್ಬವನ್ನು ಮರೆತು ತಡವಾಗಿ ವಿಶ್ ಮಾಡಿ ಟ್ರೋಲ್ ಆಗಿದ್ದು ಗೊತ್ತೇ ಇದೆ. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಮರೆತು ಟೀಕೆಗೆ ಗುರಿಯಾಗಿದ್ದರು. ಆದರೆ ಈ ಬಾರಿ ರಶ್ಮಿಕಾ ತಂದೆ ತಾಯಿಯ ಮದುವೆ ದಿನವನ್ನೇ ಮರೆತು, ತಡವಾಗಿ ವಿಶ್ ಮಾಡಿ ಟ್ರೋಲ್ ಆಗಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ವಿಶ್ ಮಾಡುತ್ತಿರುವುದಕ್ಕೆ ತಡವಾದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ.
ಈ ಕುರಿತು ಕೆಲವರು ಪ್ರತಿಕ್ರಿಯಿಸಿದ್ದು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಕಾಮೆಂಟ್ ಬರೆದಿದ್ದರೆ, ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
