Cinema News
ರಶ್ಮಿಕಾ, ವಿಜಯ್ ಮುನಿಸಿಗೆ ಕಾರಣವಾದ್ಲಾ ಬಿಟೌನ್ ಬ್ಯೂಟಿ?

ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡು ಬಳಿಕ ಕ್ಯಾನ್ಸಲ್ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ಜೋಡಿ ಹಕ್ಕಿಗಳು ಎಲ್ಲೂ ತಮ್ಮ ಪ್ರೀತಿಯ ಬಗ್ಗೆ ಬಾಯಿ ಬಿಡದೆ ಇದ್ರೂ ಆಗಾಗ ಇವ್ರಿಬ್ರನ್ನ ಒಟ್ಟಿಗೆ ನೋಡಿದವ್ರು ಸಮ್ ಥಿಂಗ್ ಇಸ್ ದೇರ್ ಎಂದಿದ್ದರು. ಆದರೆ ಇದೀಗ ರಶ್ಮಿಕಾ ವಿಜಯ್ ಮಧ್ಯೆ ಮುನಿಸು ಶುರುವಾಗಿದ್ದು ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ.

ಗೀತಾ ಗೋವಿಂದ್ ಸಿನಿಮಾ ಹಿಟ್ ಆಗಿದ್ದೇ ಆಗಿದ್ದು ಈ ಜೋಡಿಗಳು ಹೋದಲ್ಲಿ ಬಂದಲೆಲ್ಲ ಕೈ ಕೈ ಹಿಡಿದು ಸುತ್ತಾಡಿತ್ತು. ಸಿನಿಮಾ ಕಾರ್ಯಕ್ರಮ, ಖಾಸಗಿ ಸಮಾರಂಭ, ದೇಶ ವಿದೇಶ, ಶೂಟಿಂಗ್ ಸ್ಪಾಟ್ ಹೀಗೆ ಎಲ್ಲೆ ಹೋದರು ಜೊತೆ ಜೊತೆಯಾಗಿ ಹೋಗ್ತಿದ್ದವರು ಇನ್ನೆನ್ನೂ ಮದುವೆ ಆಗಿಯೇ ಬಿಟ್ಟರು ಎಂದು ಹೇಳಲಾಗ್ತಿತ್ತು. ಆದರೆ ಕಳೆದ ಕೆಲ ತಿಂಗಳುಗಳಿಂದ ಈ ಜೋಡಿಗಳು ಎಲ್ಲೆ ಹೋದರು ಸಿಂಗಲ್ ಆಗಿಯೇ ಕಾಣಿಸಿಕೊಳ್ತಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ವಿಜಯ್ ಹಾಗೂ ರಶ್ಮಿಕಾ ಮಧ್ಯೆ ಎಲ್ಲವು ಸರಿ ಇಲ್ಲ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಅಂದ ಹಾಗೆ ಈ ಜೋಡಿಗಳು ದೂರವಾಗೋಕೆ ಕಾರಣ ಬಿಟೌನ್ ಬ್ಯೂಟಿ ಎನ್ನಲಾಗ್ತಿದೆ. ವಿಜಯ್ ದೇವರಕೊಂಡ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು ಆ ಸಿನಿಮಾದ ನಟಿಯೊಂದಿಗೆ ವಿಜಯ್ ಕ್ಲೋಸ್ ಇರೋ ಕಾರಣಕ್ಕೆ ರಶ್ಮಿಕಾ ಮುನಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ರಶ್ಮಿಕಾ ಹಾಗೂ ವಿಜಯ್ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದು ಗಾಸಿಮ್ ಎನ್ನಲಾಗ್ತಿದ್ದು ಸದ್ಯ ರಶ್ಮಿಕಾ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಒಟ್ನಲ್ಲಿ ಈ ಜೋಡಿಗಳು ಮುಖ ತಿರುಗಿಸಿಕೊಂಡು ಹೋಗ್ತಿರೋದು ನೋಡಿ ಅಭಿಮಾನಿಗಳು ಮಾತ್ರ ಬೇಸರಗೊಂಡಿದ್ದಾರೆ.
