Connect with us

Cinema News

ಸ್ಯಾಂಡಲ್ವುಡ್ ಗೆ ಹೊಸ ರಾಮಾಚಾರಿ ಎಂಟ್ರಿ

Published

on

ಸ್ಯಾಂಡಲ್​ವುಡ್​ಗೂ ರಾಮಾಚಾರಿಗೂ ಬಿಡದ ನಂಟು. ಆ ರಾಮಾಚಾರಿ ನಂಟು ಇದೀಗ ಮತ್ತೆ ಮುಂದುವರಿಯುತ್ತಿದೆ. ಅವೆಲ್ಲವುಗಳ ಅಪ್​ಡೇಟ್​ ವರ್ಷನ್​ ಅವತಾರದಲ್ಲಿ ಹೊಸ ರಾಮಾಚಾರಿ ಎಂಟ್ರಿಯಾಗುತ್ತಿದ್ದಾನೆ. ಅದೇ ರಾಮಾಚಾರಿ 2.0! ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತವನ್ನು ನೆರವೇರಿಸಿಕೊಂಡ ಈ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್​ ಪ್ರಾರಂಭಿಸಿಲಿದೆ. ನಿರ್ದೇಶಕರಾದ ಶಶಾಂಕ್, ಮಹೇಶ್​, ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ಅಂದಹಾಗೆ ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ನಿರ್ದೇಶನ, ನಾಯಕ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ತೇಜ್. ಈಗಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವಿನ ರಾಮಾಚಾರಯಿಂದ ಹಿಡಿದು, ರವಿಚಂದ್ರನ್ ಅವರ ರಾಮಾಚಾರಿ, ಇತ್ತೀಚಿಗಿನ ಯಶ್ ಅವರ ಮಿ. ಮಿ ರಾಮಾಚಾರಿ ಎಲ್ಲವೂ ಹೊಸ ದಾಖಲೆ ಬರೆದ ಸಿನಿಮಾಗಳೇ. ಇದೀಗ ಅದೇ ರಾಮಾಚಾರಿ ಶೀರ್ಷಿಕೆಯನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಈ ರಾಮಾಚಾರಿ ತುಂಬ ಬುದ್ಧಿವಂತ ಹಾಗೂ ಇದು ಬಟರ್​ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್​. ಅದನ್ನು ನಾಯಕ ಹೇಗೆ ಹ್ಯಾಂಡಲ್ ಮಾಡುತ್ತಾನೆ ಎಂಬುದೇ ಕಥೆ ಎಂದು ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿದರು ತೇಜ್.

ಇನ್ನು ರಾಮಾಚಾರಿ ಅಂದಮೇಲೆ ಮಾರ್ಗರೇಟ್​ ಇರಲೇಬೇಕಲ್ಲವೇ. ಆ ಪಾತ್ರವನ್ನು ನಿಭಾಯಿಸಿದ್ದಾರೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ. ನಿಜಕ್ಕೂ ಇಂಥ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ. ಒಂದು ಕಡೆ ಭಯ ಮತ್ತೊಂದು ಕಡೆ ಅಷ್ಟೇ ಎಗ್ಸೈಟ್​ಮೆಂಟ್​ ಸಹ ಇದೆ ಎಂದರು. ಬಹುತೇಕ ಹಳ್ಳಿಗಾಡಿನಲ್ಲಿಯೇ ಈ ಸಿನಿಮಾ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಸಿದ್ಧವಾಗಿದೆ. ಜಲೀಲನಾಗಿ ವಿಜಯ್​ ಚೆಂಡೂರ್​ ಪಾತ್ರ ನಿಭಾಯಿಸಲಿದ್ದು, ಕೊಂಚ ಭಯದಲ್ಲಿಯೇ ಇದ್ದಾರೆ. ಆ ಹೆಸರಿನಲ್ಲಿಯೇ ಒಂದು ತೂಕವಿದೆ. ಹೈ ವೋಲ್ಟೇಜ್​ ಹೆಸರದು. ಹಾಗಾಗಿ ಹೆಸರಿಗೆ ತಕ್ಕದಾದ ಪಾತ್ರವೇ ನನಗೆ ಸಿಕ್ಕಿದೆ ಎಂದರು.

ಇನ್ನುಳಿದಂತೆ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಮುಖ್ಯ ಪಾತ್ರದಲ್ಲಿದ್ದಾರೆ. ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಾಯಕನಾಗಿ ನಟನೆ, ನಿರ್ದೇಶನ ಮತ್ತು ನಿರ್ಮಾಣವನ್ನು ತೇಜ್​ ಮಾಡುತ್ತಿದ್ದಾರೆ. ಪ್ರೇಮ್​ ಛಾಯಾಗ್ರಹಣ, ಸುಂದರ್​ ಮೂರ್ತಿ ಸಂಗೀತ ನೀಡಲಿದ್ದು, ರಾಜೇಶ್​ ಕೃಷ್ಣನ್, ಸಂತೋಷ್, ಐಶ್ವರ್ಯಾ ರಂಗರಾಜನ್​ ಹಾಡುಗಳಿಗೆ ಧ್ವನಿ ನೀಡುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *