Cinema News
ರಾಮ್ ಗೋಪಾಲ್ ವರ್ಮ ನಿರ್ದೇಶನದ “ಡೇಂಜರಸ್” ಈ ವಾರ ಬಿಡುಗಡೆ.

ಟಾಲಿವುಡ್ ಮತ್ತು ಬಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್‌ವರ್ಮ ಈ ಬಾರಿ ಸಲಿಂಗಕಾಮಿ ಕಥೆಯನ್ನು ಹೊಂದಿರುವ ’ಕತ್ರಾ ಡೆಂಜರಸ್’ ಚಿತ್ರವನ್ನು ಮುಗಿಸಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ. ಪ್ರಚಾರದ ಸಲುವಾಗಿ ತಂಡವು ಬೆಂಗಳೂರಿಗೆ ಭೇಟಿ ನೀಡಿ ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ 2018ರಲ್ಲಿ ಮಹತ್ವದ ತೀರ್ಪು ನೀಡಿರುತ್ತದೆ. ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಕಾಲ್ಪನಿಕ ಘಟನೆಗೆ ಆಕ್ಷನ್, ಕ್ರೈಮ್ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ರಿಂಪಿ ಆರ್ಟ್ಸ್ ಮಿಡಿಯಾ ಅಂಡ್ ರಿಂಪಿ ಆರ್ಟ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

ಸಲಿಂಗಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ಒಂದು ರೀತಿಯಲ್ಲಿ ನೋಡುತ್ತದೆ. ಪ್ರೇಮಕತೆಯಾಗಿ ಉಳಿಯಬೇಕು, ಕಾಮಕತೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಮುಖ್ಯ ಪಾತ್ರದಲ್ಲಿ ನೈನಾಗಂಗೂಲಿ ಹಾಗೂ ಅಪ್ಸರರಾಣಿ ಉಳಿದಂತೆ ರಾಜ್‌ಪಾಲ್‌ಯಾದವ್, ಘಾಜಿ, ಮಿಥುನ್‌ಪುರಂದರಿ ನಟಿಸಿದ್ದಾರೆ. ಸಂಗೀತ ಪ್ರವೀಣ್‌ಪೌಲ್, ಛಾಯಾಗ್ರಹಣ ಮಲ್‌ಹಾರ‍್ಬತ್ ಜೋಷಿ, ಸಂಕಲನ ಕಮಲ್‌ರಮದುಗು ಅವರದಾಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಪ್ರಾರಂಭದಲ್ಲಿ ಚಿತ್ರದ ಎರಡು ಹಾಡುಗಳು ಹಾಗೂ ಟ್ರೈಲರ್‌ನ್ನು ತೋರಿಸಲಾಯಿತು. ಅಂದಹಾಗೆ ಸಿನಿಮಾವು ಏಪ್ರಿಲ್ ೮ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.
