Cinema News
ಬಾಯ್ ಫ್ರೆಂಡ್ ಮುಂದೆ ಕಾಂಡೋಮ್ ಬಗ್ಗೆ ಬಾಯಿ ಬಿಟ್ಟ ರಾಕಿ

ಬಾಲಿವುಡ್ ನಟಿ ರಾಕಿ ಸಾವಂತ್ ನಿತ್ಯ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಮೈಸೂರಿನ ಹುಡುಗ ಆದಿಲ್ ಜೊತೆ ಸುತ್ತಾಟ, ಶಾಪಿಂಗ್ ಅಂತ ಬ್ಯುಸಿಯಾಗಿರೋ ರಾಕಿ ಇದೀಗ ಬಾಯ್ ಫ್ರೆಂಡ್ ಮುಂದೆ ಕಾಂಡೋಮ್ ಬಗ್ಗೆ ಮಾತನಾಡಿದ್ದಾರೆ.
ಆದಿಲ್ ಜೊತೆ ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ರಾಕಿ ಸಾವಂತ್ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದಾರೆ.
‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ ಲೈಂಗಿಕತೆಯ ಕುರಿತಾದ ಕಥೆಯನ್ನು ಹೇಳಲಾಗಿದೆ. ಅಲ್ಲದೇ, ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತೆ ಮೂಡಿಸಲಾಗಿದೆ. ಈ ಸಿನಿಮಾವನ್ನು ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಿಕೊಂಡು ಬಂದ ರಾಕಿ, ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ಜನರ ಮನಸ್ಸು ವಿಚಿತ್ರವಾಗಿದೆ. ಮದ್ಯವನ್ನು ಕೊಳ್ಳಲು ತಾಸುಗಟ್ಟಲೇ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಕೊಳ್ಳಲು ಮುಜುಗರ ಪಡುತ್ತಾರೆ’ ಎಂದು ಹೇಳಿದ್ದಾರೆ.
ರಾಕಿ ಈ ಮಾತುಗಳನ್ನು ಆಡುತ್ತಿದ್ದಂತೆಯೇ ಆದಿಲ್ ಕಣ್ಣು ಮಿಟುಗಿಸದೇ ರಾಕಿಯನ್ನೇ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ರಾಕಿ ಯಾರಿಗೆ ಹೇಳುತ್ತಿದ್ದಾಳೆ ಎಂದು ತಿಳಿಯದೇ ಆದಿಲ್ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ.
