Cinema News
ರೈಲಿನ ಮೇಲೆಲ್ಲ ನಾರಾಯಣನದ್ದೇ ಹವಾ!
ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹವಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗ ರೈಲಿನ ಮೇಲೂ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಕಿರಿಕ್ ಪಾರ್ಟಿಯ ನಂತರ ರಕ್ಷಿತ್ ಶೆಟ್ಟಿ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ, ಈಗ ಅವನೇ ರಿಲೀಸ್ ಆಗುತ್ತಿದ್ದು, ಇದು ಬಿಗ್ ಬಜೆಟ್ ಚಿತ್ರವಾಗಿದೆ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿರುವ ಈ ಸಿನಿಮಾದ ಪೋಸ್ಟರ್‌ಗಳು ಮತ್ತು ಟ್ಯಾಬ್ಲೋಗಳು ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡುತ್ತಿವೆ. ಈಗ ರೈಲಿನ ಮೇಲೂ ಅವನೇ ಶ್ರೀಮನ್ನಾರಾಯಣ ಸಿನಿಮಾದ ಪೋಸ್ಟರ್‌ಗಳು ಇದ್ದು, ಜನರಿಗೆ ಅದರ ಕ್ರೇಜ್ ಸೃಷ್ಟಿ ಮಾಡುತ್ತಿವೆ.
ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದು, ಅಚ್ಯುತ್‌ಕುಮಾರ್, ಬಾಲಾಜಿ ಮನೋಹರ್ ಸೇರಿದಂತೆ ದೊಡ್ಡ ತಾರಾಗಣವೇ ತುಂಬಿದೆ. ಇದೇ 27ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.