Cinema News
ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಗೆಲುವು ಕಾಣುವುದಿಲ್ಲ: ಜಗ್ಗೇಶ್

ತುಮಕೂರು: ಇ.ಡಿ ಯಾರೇ ತಪ್ಪು ಮಾಡಿದ್ರು ತನಿಖೆ ಮಾಡುವ ಸಂಸ್ಥೆ. ರಾಹುಲ್ ಗಾಂಧಿ ಕುಟುಂಬದ ಮೇಲೆ 2 ಸಾವಿರ ಕೋಟಿ ಹಗರಣದ ಆರೋಪ ಇದೆ. ಹಾಗಾಗಿ, ಅವರು ತನಿಖೆಗೆ ಸಹಕರಿಸಬೇಕು, ಅದು ಅವರ ಜವಾಬ್ದಾರಿ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.
ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದ ಜನರು ಬುದ್ದಿವಂತರು, ಸರಿ-ತಪ್ಪು ನೋಡುತ್ತಾರೆ. ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಇವರು ಗೆಲುವು ಕಾಣುವುದಿಲ್ಲ. ಹಿಂದೆ ಹೇಳಿದೆಲ್ಲಾ ನಂಬುವ ಕಾಲ ಇತ್ತು. ಈಗ ಸೋಶಿಯಲ್ ಮೀಡಿಯಾ ಕಾಲ. ಜನರು ಎಲ್ಲವನ್ನೂ ನೋಡುತ್ತಾರೆ. ಇಡಿ 2013ರಲ್ಲಿ ಆಗಿದ್ದು, ಯುಪಿಎ ಮಾಡಿದ್ದು. ತಮ್ಮ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಕಾಂಗ್ರೆಸ್ನವರು ಹೀಗೆ ಮಾಡುತ್ತಿದ್ದಾರೆ. ಇವರ ಈ ಪ್ರತಿಭಟನೆಗೆ ಫಲ ಸಿಗೋದಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಜಗ್ಗೇಶ್, ನನ್ನ ಹುಟ್ಟೂರಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜನೆಯಾಗಿದೆ. ನನ್ನೂರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಆರ್.ಅಶೋಕ್ಗೆ ಧನ್ಯವಾದ. ಮಾಯಸಂದ್ರ ಅಭಿವೃದ್ಧಿಗೆ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಒಂದು ಮಾದರಿ ಪಂಚಾಯತ್ ಮಾಡಲು ತೀರ್ಮಾನಿಸಿದ್ದಾರೆ ಎಂದರು.
