Cinema News
ಡೈವೊರ್ಸ್ ತೆಗೆದುಕೊಳ್ತಾ ಇದ್ದಾರೆ ರಘು ದಿಕ್ಷೀತ್ ದಂಪತಿ!

ಖ್ಯಾತ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ನೃತ್ಯಗಾರ್ತಿ ಮಯೂರಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ ಬಂದಾಗ ಅವರು, ಮಯೂರಿ ಜತೆ ಇಲ್ಲದಿರುವ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಈಗ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿರುವುದು ಅವರಿಬ್ಬರೂ ದೂರವಾಗುತ್ತಿರುವುದನ್ನು ಕನ್ಫರ್ಮ್ ಮಾಡಿದೆ.
ಈಗಾಗಲೇ ಕಳೆದ ಒಂದು ವರ್ಷದಿಂದ ಇಬ್ಬರೂ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಈಗ ಪರಸ್ಪರ ಒಪ್ಪಿಕೊಂಡು ಅರ್ಜಿ ಸಲ್ಲಿಸಿರುವ ಕಾರಣ ನ್ಯಾಯಾಲಯ 6 ತಿಂಗಳ ಗಡುವು ನೀಡಿದೆ. ಇನ್ನು ಕೌಟುಂಬಿಕ ಕಾರಣಕ್ಕೆ ಇಬ್ಬರೂ ಡೈವೋರ್ಸ್ ತೆಗೆದುಕೊಳ್ಳುತ್ತಿದ್ಧಾರಂತೆ. ಈ ಆರು ತಿಂಗಳಿನಲ್ಲಿ ಅವರಿಬ್ಬರು ಮನಸ್ಸು ಬದಲಾಯಿಸಿ ಒಟ್ಟಿಗೆ ಇರುತ್ತೇವೆ ಎಂದರೆ ಕೋರ್ಟ್ ಅದಕ್ಕೆ ಸಮ್ಮತಿ ಸೂಚಿಸುತ್ತದೆ.
ಒಟ್ಟಿನಲ್ಲಿ ಕರ್ನಾಟಕದ ಹೆಮ್ಮೆ ಎಂದು ಹೇಳಿಕೊಳ್ಳುತ್ತಿದ್ದ ಜೋಡಿಯೊಂದು ಈಗ ವೈಯಕ್ತಿಕ ಕಾರಣಗಳಿಗೆ ಬೇರೆ ಬೇರೆಯಾಗುತ್ತಿರುವುದರಿಂದ ಇಬ್ಬರ ಅಭಿಮಾನಿಗಳೂ ಬೇಸರವಾಗಿದೆ.
