Cinema News
ರಾಮಾರ್ಜುನನಿಗೆ ಧನಿಯಾದ ಪುನೀತ್‌ರಾಜ್‌ಕುಮಾರ್
ನಟ ಅನೀಶ್ ನಿರ್ದೇಶನ ಮಾಡುತ್ತಿರುವ ರಾಮಾರ್ಜುನ ಸಿನಿಮಾಗೆ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಹಾಡಿದ್ದಾರೆ. ಪುನೀತ್ ಹಾಡಿರುವ ಹಾಡಿನ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ರಿಲೀಸ್ ಆಗಲಿದೆಯಂತೆ.
ಈ ಹಿಂದೆ ಅನಿಶ್ ನಟಿಸಿದ್ದ ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಕಿರ ಸಿನಿಮಾಗೆ ಪುನೀತ್ ಹಾಡಿದ್ದರು. ಈಗ ರಾಮಾರ್ಜುನಕ್ಕೂ ಹಾಡಿದ್ದಾರೆ. ಈ ಹಾಡನ್ನು ಅಕಿರ ಸಿನಿಮಾದ ನಿರ್ದೇಶಕ ನವೀನ್ ರೆಡ್ಡಿ ಹಾಡಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ರಾಮಾರ್ಜುನ ಒಂದು ಏರಿಯಾದಲ್ಲಿ ನಡೆಯುವ ಕಥೆಯಾಗಿದ್ದು, ನಾಯಕ ಇನ್ಸುರೆನ್ಸ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಒಂದು ಕೊಲೆಯಾಗುತ್ತದೆ, ಅದು ಯಾಕಾಯ್ತು, ಹೇಗೆ ಆಯ್ತು ಎಂಬುದೇ ಸಿನಿಮಾದ ಕಥೆ. ಇನ್ನು ಈ ಸಿನಿಮಾದಲ್ಲಿ ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್‌ಗೆ ಬೇರೆ ಬೇರೆ ಕಥೆಗಳಿದೆಯಂತೆ.
ಅನಿಶ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು, ರಂಗಾಯಣ ರಘು, ಗಿರಿ, ಹರೀಶ್ ರಾಜ್ ಸೇಇದಂತೆ ದೊಡ್ಡ ತಾರಾಗಣವೆ ಚಿತ್ರದಲ್ಲಿದೆ.