Cinema News
ಮತ್ತೆ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ, ಹಾಲಿವುಡ್‌ನ ನಿಕ್ ಜೋನಸ್ ಪತ್ನಿ ಪ್ರಿಯಾಂಕ ಚೋಪ್ರಾ ತಮ್ಮ ಡ್ರೆಸ್‌ನಿಂದಾಗಿ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಈ ಬಾರಿ ಅವರು ಚೇಸಿಂಗ್ ಹ್ಯಾಪಿನೆಸ್ ಸಿನಿಮಾದ ವರ್ಲ್ಡ್ ಪ್ರೀಮಿಯರ್‌ನಲ್ಲಿ ತಾವು ಧರಿಸಿದ ಬಟ್ಟೆಯಿಂದ ಟ್ರೋಲ್ ಆಗಿದ್ದಾರೆ.
ಈ ಪ್ರಿಮಿಯರ್ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದು, ಅಲ್ಲಿಗೆ ಇಡೀ ಜೋನಸ್ ಕುಟುಂಬ ತೆರಳಿತ್ತು. ಈ ವೇಳೆ ಪ್ರಿಯಾಂಕಾ ಧರಿಸಿದ ಉಡುಪನ್ನು ಕಂಡು ಟ್ರೋಲಿಗರು ಅವರಿಗೆ ಕುಟುಕಿದ್ದಾರೆ.

ಈ ಹಿಂದೆ ಮೆಟ್ ಗಾಲ ಮತ್ತು ಕೇನ್ಸ್ ಚಿತ್ರೋತ್ಸವದ ಸಮಯದಲ್ಲಿ ಅವರು ತಮ್ಮ ಡ್ರೆಸ್‌ನಿಂದಾಗಿ ಟ್ರೋಲ್ ಆಗಿದ್ದರು. ತಮಗಿಂತ ಅತಿ ಕಿರಿಯನನ್ನು ಮದುವೆಯಾಗಿ ಅವರಂತೆ ಯಂಗ್ ಆಗಿ ಕಾಣಿಸಿಕೊಳ್ಳಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂಬಂತಹ ಕಮೆಂಟ್‌ಗಳು ಪ್ರಿಯಾಂಕಗೆ ಸಿಗುತ್ತಿವೆ.

Continue Reading