Cinema News
ಸದ್ಯದಲ್ಲೇ ಬರಲಿದೆ “ಪ್ರೀತಿಯ ರಾಯಭಾರಿ” ಹುಡಗ ನಕುಲ್ ಅಭಿನಯದ ಹೊಸಚಿತ್ರ

ಕಳೆದ ಕೆಲವು ವರ್ಷಗಳ ಹಿಂದೆ “ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಪ್ರೀತಿಗಳಿಸಿದ ಸುಂದರ ನಟ ನಕುಲ್.
ಸದ್ಯ ನಕುಲ್ ನಾಯಕನಟರಾಗಿ ನಟಿಸಿರುವ ನೂತನ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸದ್ಯದಲ್ಲೇ ನಡೆಯಲಿದೆ. ತಮ್ಮ ಹಿಂದಿನ ಚಿತ್ರದಲ್ಲಿ ತಮ್ಮ ಸಹಜ ನಟನೆಯ ಮೂಲಕ ನಾಯಕ ನಕುಲ್ ಎಲ್ಲರ ಮನ ಗೆದ್ದಿದ್ದರು. ಈ ಚಿತ್ರ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಲ್ಲಿ ಯಾವುದೇ ಸಂಶಯವಿಲ್ಲ. ಮಾನ್ವಿತ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಅದರಲ್ಲೂ ಹೆಚ್ ಎಂ ಟಿ ಬಳಿ ನಿರ್ಮಿಸಲಾಗಿದ್ದ ಅದ್ಭುತ
ಸೆಟ್ ನಲ್ಲಿ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿರುವುದು ವಿಶೇಷ.
ಪಿ.ಸಿ.ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿದೆ.
ನಾದಕಿರಣ್ ಪಿಕ್ಚರ್ಸ್ ಮೂಲಕ “ಪ್ರೊಡಕ್ಷನ್ ನಂ2” ಎಂಬ ಹೆಸರಿನಲ್ಲಿ ಕಿರಣ್ ಈ
ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಹಿಂದೆ “ಪ್ರೀತಿಯ ರಾಯಭಾರಿ” ಚಿತ್ರ ಸಹ ಇದೇ ಸಂಸ್ಥೆ ನಿರ್ಮಿಸಿತ್ತು.

