Cinema News
ಮೊದಲ ಭಾರಿಗೆ ಮಕ್ಕಳ ಫೋಟೋ ಹಂಚಿಕೊಂಡ ಅಮೂಲ್ಯ: ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಸ್ಯಾಂಡಲ್ವುಡ್ ನಟಿ ಅಮೂಲ್ಯ ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೋ ಹಂಚಿಕೊಂಡಿದ್ದಾರೆ. ಮಾರ್ಚ್ನಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಿದ ಅಮೂಲ್ಯ ಇದುವರೆಗೂ ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಸದ್ಯ ಅಮೂಲ್ಯ ಶೇರ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುದ್ದು ಮಕ್ಕಳ ಫೋಟೋ ಹಂಚಿಕೊಳ್ಳಿ ಎಂದು ಸಾಕಷ್ಟು ಅಭಿಮಾನಿಗಳು ಅಮೂಲ್ಯ ಅವರನ್ನು ಕೇಳಿಕೊಂಡಿದ್ದರು. ಆದರೆ ಇದೀಗ ಅಮೂಲ್ಯ ಮಕ್ಕಳ ಪಾದ ಕಾಣುವಂತೆ ಫೋಟೋ ಹಾಕಿದ್ದಾರೆ. ಅವರು ಮಕ್ಕಳ ಮುಖ ತೋರಿಸಿಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಮಕ್ಕಳ ಪಾದ ಹಿಡಿದು ಮುದ್ದಾಡುತ್ತಿರುವ ಅಮೂಲ್ಯ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಾಲನಟಿಯಾಗಿ ಚಂದನವನಕ್ಕೆ ಎಂಟ್ರಿಕೊಟ್ಟ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು. ಗಾಂಧಿನಗರದಲ್ಲಿ ಡಿಮ್ಯಾಂಡ್ ಇರುವಾಗಲೇ 2017ರಲ್ಲಿ ಜಗದೀಶ್ ಆರ್. ಚಂದ್ರ ಜೊತೆ ಹಸೆಮಣೆ ಏರಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ ನಟಿ ಈ ವರ್ಷ ಮಾರ್ಚ್ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದರು.
