Cinema News

ಶ್ರೀಮುರುಳಿ ಮುಂದಿನ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ಮಾಪಕ

Published

on

ಶ್ರೀಮುರುಳಿ ವಿಷಯದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡುತ್ತಿವೆ. ಈಗ ಹೊಸ ಸುದ್ದಿ ಏನಂದರೆ ಅವರು ನಟಿಸುವ ಮುಂದಿನ ಸಿನಿಮಾದ ನಿರ್ಮಾಪಕರು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ .

 

 

ಹೌದು, ಪ್ರಶಾಂತ್‌ ನೀಲ್‌ ನಿರ್ಮಾಣದಲ್ಲಿ ಶ್ರೀಮುರುಳಿ ನಟಿಸುತ್ತಿದ್ದಾರೆ. ಜತೆಗೆ ಪ್ರಶಾಂತ್‌ ನೀಲ್‌ ಇದಕ್ಕೆ ಕಥೆಯನ್ನು ಒದಗಿಸುತ್ತಿದ್ದಾರೆ. ಈ ಚಿತ್ರವನ್ನು ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ಸೂರಿ ಲಕ್ಕಿ ಸಿನಿಮಾದ ನಂತರ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಯಶ್‌ ಜತೆ ಓಡಾಡಿಕೊಂಡು ಇದ್ದರು. ಈಗ ಪ್ರಶಾಂತ್‌ ನೀಲ್‌ ಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆ ಮಹೇಶ್‌ಕುಮಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಕಥೆಯೇನು ಎಂಬುದು ಗೊತ್ತಾಗುತ್ತಿಲ್ಲ. ಮಹೇಶ್‌ ನಿರ್ದೇಶನದ ಸಿನಿಮಾದ ಕಥೆ ಮತ್ತು ಟೈಟಲ್‌ ಎಲ್ಲವೂ ಬದಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು. ಈಗ ಆ ಸಿನಿಮಾವೇ ಮುಂದಕ್ಕೆ ಹೋಗಿದೆ ಎನ್ನುತ್ತಿವೆ ಮೂಲಗಳು.

 

 

ಇನ್ನೊಂದು ಬಲ್ಲ ಮೂಲಗಳ ಪ್ರಕಾರ ಈ ಮಹೇಶ್‌ ಚಿತ್ರದ ನಂತರ ಪ್ರಶಾಂತ್ ನೀಲ್‌ ಕಥೆಯ ಸಿನಿಮಾ ಆರಂಭವಾಗುತ್ತದೆ. ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಜತೆ 6-5=2 ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಅವರೂ ಸಹ ಬಂಡವಾಳ ಹೂಡುತ್ತಿದ್ದಾರೆ. ಇದು ಶ್ರೀಮುರುಳಿಯ ಹುಟ್ಟು ಹಬ್ಬ ಡಿ 17ಕ್ಕೆ ಅನೌನ್ಸ್‌ ಆಗಲಿದೆ. ಒಟ್ಟಿನಲ್ಲಿ ಭರಾಟೆಯ ನಂತರ ಶ್ರೀಮುರುಳಿ ಕರಿಯರ್‌ನಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗುತ್ತಿವೆ.

Spread the love
Click to comment

Copyright © 2019 PopcornKannada.com