Cinema News
“ಪ್ರಹ್ಲಾದ” ಜನವರಿ 14 ರ ಸಂಕ್ರಾಂತಿ ದಿನದಂದು ಚಿತ್ರ ಸೆಟ್ಟೆರಲಿದೆ

ಶ್ರೀ ಕಾಳಿಕಾಂಭ ಪ್ರೊಡಕ್ಷನ್ ರವರ ಚೊಚ್ಚಲ ಚಿತ್ರ “ಪ್ರಹ್ಲಾದ “ಎಂಬ ಹೆಸರಿನ ಕನ್ನಡ ಚಿತ್ರವೊಂದು ಸದ್ಯದಲ್ಲೆ ಸೆಟ್ಟೆರಲಿದ್ದು ಹೊನ್ನಾಳಿ ಮೂಲದವರಾದ ಶ್ಯಾಮ್ ಆಚಾರ್ಯ ನಿರ್ಮಿಸಿ,ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಯುವ ಪ್ರತೀಭೆ ನರಸಿಂಹರಾಜು ಕಥೆ,ಚಿತ್ರಕಥೆ ಯನ್ನ ಬರೆದಿದ್ದಾರೆ. ವಿವೇಕ್ ಚಕ್ರವರ್ತಿಯವರ ಸಂಗೀತವಿದ್ದು ನಾಗೇಂದ್ರ ಅರಸ್ ರವರ ಸಂಕಲನವಿದೆ.ಛಾಯಗ್ರಾಹಣ ಎಂ.ಬೆನಕರಾಜು ಹಾಗೂ ಸಾಹಸ ಕುಂಫುಚಂದ್ರು ಹೆಗಲಿಗಿದೆ.ನಾಯಕ ಪಾತ್ರಕ್ಕೆ ನರಸಿಂಹರಾಜು ಹಾಗೂ ನಾಗಶೌರ್ಯ ಆಯ್ಕೆ ಅಗಿದ್ದು ನಾಯಕಿ ಪಾತ್ರಕ್ಕೆ ತಲಾಷ್ ನಡೆದಿದೆ.ಯುವ ಹಾಗೂ ಹೊಸ ಮುಖಗಳೆ ಚಿತ್ರತಂಡದಲ್ಲಿದ್ದು ಜನವರಿ 14 ರ ಸಂಕ್ರಾಂತಿ ದಿನದಂದು “ಪ್ರಹ್ಲಾದ”ಚಿತ್ರ ಸೆಟ್ಟೆರಲಿದೆ.ಬೆಂಗಳೂರು ಸೇರಿದಂತೆ ಮಲೆನಾಡಿನ ಶಿವಮೊಗ್ಗ, ಹೊನ್ನಾಳಿ ಹಾಗೂ ಊಟಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಅಂತಾ ಚಿತ್ರತಂಡ ತಿಳಿಸಿದೆ.

Continue Reading