Connect with us

Cinema News

ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾದ ಮೊದಲ ನೋಟ ಅನಾವರಣ…ಜುಲೈನಲ್ಲಿ ತೆರೆಗೆ ಬರ್ತಿದೆ ಸಿನಿಮಾ

Published

on

ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರನ್ನು ಗಮನಸೆಳೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ತಯಾರಾಗುರುವ ಸಿನಿಮಾ ಡೊಳ್ಳು. ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಡೊಳ್ಳು ಚಿತ್ರದ ಮೊದಲ ಝಲಕ್ ಚಿತ್ರಪ್ರೇಮಿಗಳ ಮಡಿಲು ಸೇರಿದೆ.

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್ ನ್ನು ಕಟ್ಟಿಕೊಡಲಾಗಿದೆ.

ಡೊಳ್ಳು ಕುಣಿತ ಕಂಟೆಂಟ್ ಹೊಂದಿರುವ ಈ ಸಿನ್ಮಾ ಈಗಾಗ್ಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವಿಸ್’ ನಿರ್ಮಾಣ ಸಂಸ್ಥೆಯಡಿ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದಾರೆ.

ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾದಲ್ಲಿ . ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಲಿದ್ದಾಪರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಛಾಯಾಗ್ರಹಣ, ಬಿಎಸ್ ಕೆಂಪರಾಜು ಸಂಕಲನವಿರುವ ಡೊಳ್ಳು ಸಿನಿಮಾ ಜುಲೈನಲ್ಲಿ ಥಿಯೇಟರ್ ಗೆ ಆಗಮನವಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *