Connect with us

Movie Reviews

Paru Parvathy Movie Review

Published

on

ದೀಪಿಕಾ ದಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಪಾರು ಪಾರ್ವತಿ” ಚಿತ್ರವನ್ನು ರೋಹಿತ್ ಕೀರ್ತಿ ನಿರ್ದೇಶಿಸಿದ್ದಾರೆ. ತಮ್ಮ ಮೊದಲ ನಿರ್ದೇಶನದಲ್ಲಿಯೇ ಅವರು ಪ್ರೇಕ್ಷಕರನ್ನು ಉತ್ತರಹಳ್ಳಿಯಿಂದ ಮಥುರಾ ಮತ್ತು ಉತ್ತರಾಖಂಡಕ್ಕೆ ಯಶಸ್ವಿಯಾಗಿ ಕರೆದೊಯ್ಯುತ್ತಾರೆ. ಪ್ರೇಮ, ಸಾಹಸ ಮತ್ತು ಭಾವನೆಗಳ ಸುತ್ತ ವೀಕ್ಷಕನನ್ನು ಒಯ್ಯುವ ಈ ಚಿತ್ರ, ಉದ್ಯೋಗದಲ್ಲಿ ನಿರತರಾಗಿರುವ ಯುವಕರು ತಮ್ಮ ಹಿರಿಯ ಪೋಷಕರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಮಹತ್ವವನ್ನು ಒತ್ತಿಹೇಳುತ್ತದೆ.

ಪ್ರವಾಸ ಎಂದರೆ ಯಾವಾಗಲೂ ಒಂದೇ ರೀತಿಯಾಗಿರೋದಿಲ್ಲ. ಕೆಲವೊಮ್ಮೆ ಅದೊಂದು ರೋಚಕ ಅನುಭವವಾಗಬಹುದು, ಮತ್ತೆ ಕೆಲವೊಮ್ಮೆ ಸಾದಾಸೀಧಾ ಅನಿಸುತ್ತದೆ. ‘#ಪಾರುಪಾರ್ವತಿ’ ಚಿತ್ರವೂ ಅದೆ ರೀತಿಯ ಅನುಭವ ಕೊಡುತ್ತದೆ. ಕೆಲವು ದೃಶ್ಯಗಳು ಕುತೂಹಲ ಮೂಡಿಸುತ್ತವೆ, ಆದರೆ ಕೆಲವು ಕ್ಷಣಗಳು ಸ್ವಲ್ಪ ನೀರಸವಾಗುವ ಭಾವನೆಯನ್ನು ಉಂಟುಮಾಡುತ್ತವೆ.

ಚಿತ್ರದಲ್ಲಿ ಒಳ್ಳೆಯ ತಿರುವುಗಳು ಇದ್ದರೂ, ಕೆಲವೊಂದು ಅನಗತ್ಯ ದೃಶ್ಯಗಳು ಹಿನ್ನಡೆ ಉಂಟುಮಾಡಬಹುದು. ಕತೆ ಇನ್ನಷ್ಟು ಚುರುಕು ಆಗಿ, ಕೆಲವು ಅನಗತ್ಯ ದೃಶ್ಯಗಳನ್ನು ಕಡಿತ ಮಾಡಿದ್ದರೆ, ಚಿತ್ರದ ವೇಗ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಈ ಸಿನಿಮಾದ ಆಶಯ, ಮುಟ್ಟಬೇಕಾದ ಗುರಿಯ ಬಗ್ಗೆ ಮಾತ್ರವಲ್ಲ, ದಾರಿ ಮತ್ತು ಪ್ರಯಾಣದ ಮಹತ್ವವನ್ನೂ ಒತ್ತಿಹೇಳುವುದು. ಆದರೆ, ಒಳ್ಳೆಯ ಪ್ರಯಾಣವನ್ನೆ ಅನುಭವಿಸಬೇಕಾದರೆ, ದಾರಿಯೇ ತಡೆವಂತಿರಬಾರದು. ಸ್ವಲ್ಪ ಕತೆ ಚುರುಕು ಮತ್ತು ಸರಳವಾಗಿದ್ದರೆ, ಚಿತ್ರ ಇನ್ನೂ ಹೆಚ್ಚು ಆಕರ್ಷಕವಾಗಿರುತ್ತಿತ್ತು.

ದೀಪಿಕಾ ದಾಸ್ ತಮ್ಮ ಪಾತ್ರವನ್ನು ಸಹಜವಾಗಿ ಅಭಿನಯಿಸಲು ಪ್ರಯತ್ನಿಸಿದ್ದಾರೆ. ಪ್ರೀತಿಯ ನೋವು ಅನುಭವಿಸಿದರೂ, ಇತರರಿಗೆ ಸಹಾಯ ಮಾಡುವ ಯುವತಿಯಾಗಿ ಅವರ ಅಭಿನಯ ಪರ್ವಾಗಿಲ್ಲ . ಸಾಹಸ ದೃಶ್ಯಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ಪೂಣಂ ಸಿರ್ನಾಯಿಕ್ ತಮ್ಮ ಪಾತ್ರವನ್ನು ಮನಮುಟ್ಟುವಂತೆ ನಿರ್ವಹಿಸಿದ್ದಾರೆ. ಫವಾಝ್ ಅಶ್ರಫ್, ಕೆ.ಎಸ್. ಶ್ರೀಧರ್, ರಘು ರಮಣಕೊಪ್ಪ (ಡ್ರೈವಿಂಗ್ ಇನ್‌ಸ್ಟ್ರಕ್ಟರ್ ಪಾತ್ರದಲ್ಲಿ) ಮತ್ತು ಪ್ರಶಾಂತ್ ನಟನಾ ಅವರ ಪಾತ್ರಗಳಿಗೆ ತಕ್ಕಂತೆ ಉತ್ತಮ ಅಭಿನಯ ನೀಡಿದ್ದಾರೆ.

ಛಾಯಾಗ್ರಾಹಕ ಅಬಿನ್ ರಾಜೇಶ್ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಚಿತ್ರ ಸುಂದರವಾಗಿ ಕಾಣಲು ಅವರ ಕೆಲಸ ದೊಡ್ಡ ಕಾರಣ. ಸಂಗೀತ ನಿರ್ದೇಶಕ ಆರ್. ಹರಿ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದೆ.

ಒಟ್ಟಾರೆ, ‘#ಪಾರುಪಾರ್ವತಿ’ ಮಂದಗತಿಯ ಸಿನಿಮಾವನ್ನು ಇಷ್ಟಪಡುವವರು ಕುಟುಂಬದೊಂದಿಗೆ ಕುಳಿತು ನೋಡಬಹುದಾದ ಸಿನಿಮಾ.

Rating – 3/5

Spread the love

Continue Reading
Click to comment

Leave a Reply

Your email address will not be published. Required fields are marked *