Cinema News

ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!

Published

on

ಈಗಾಗಲೇ ಹಾಡುಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರಿ ಕ್ರೇಜ್‌ ಸೃಷ್ಟಿ ಮಾಡಿರುವ ಪೈಲ್ವಾನ್‌ ಸಿನಿಮಾದ ಟ್ರೈಲರ್ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 

ಮೂಲಗಳ ಪ್ರಕಾರ ಮುಂದಿನ ವಾರ(ಆಗಸ್ಟ್ 18 ರಿಂದ -24 ರೊಳಗೆ)ಪೈಲ್ವಾನ್‌ ಸಿನಿಮಾದ ಟ್ರೈಲರ್ ಎಲ್ಲ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ, ಪ್ರತಿಭಾಷೆಯಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಭಾನುವಾರ(ಆ.18) ನಡೆಯುವ ಆಡಿಯೋ ಬಿಡುಗಡೆ ಸಮಾರಂಭದಲ್ಲಿಯೂ ಬಹುಶಃ ಚಿತ್ರದ ಟ್ರೇಲರ್‌ನ್ನು ತೋರಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು, ಈ ಸಿನಿಮಾ ಸೆ.12ಕ್ಕೆ ಬಿಡುಗಡೆಯಾಗಲಿದೆ.

 

 

ಕಿಚ್ಚ ಸುದೀಪ್‌ ‘ಪೈಲ್ವಾನ್‌’ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸುನೀಲ್‌ ಶೆಟ್ಟಿ, ಕಬೀರ್‌ ಸಿಂಗ್‌ ದುಹಾನ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಮೊನ್ನೆಯಷ್ಟೇ ಧ್ರುವತಾರೆ ಎಂಬ ಹಾಡು ಬಿಡುಗಡೆಯಾಗಿ ವೈರಲ್‌ ಆಗಿದೆ.

 

ಸಿನಿಮಾದ ಟೀಸರ್‌ ಬಿಡುಗಡೆಯಾದಾಗ ಇಡೀ ಭಾರತೀಯ ಚಿತ್ರರಂಗ ಮೆಚ್ಚಿಕೊಂಡಿತ್ತು. ಹಿಂದಿಯ ಸಲ್ಮಾನ್‌ ಖಾನ್‌, ತಮಿಳಿನ ಧನುಷ್‌ ಸೇರಿದಂತೆ ಎಲ್ಲರೂ ಸುದೀಪ್‌ ಅವರ ಶ್ರಮವನ್ನು ಮೆಚ್ಚಿಕೊಂಡು ಸೋಷಿಯಲ್‌ ಮಿಡಿಯಾದಲ್ಲಿ ಪೈಲ್ವಾನ್‌ ಟೀಸರ್‌ನ್ನು ಶೇರ್‌ ಮಾಡಿದ್ದರು. ಈಗ ಟ್ರೇಲರ್‌ ಮೇಲೂ ಅಷ್ಟೇ ನಿರೀಕ್ಷೆ ಹುಟ್ಟಿಕೊಂಡಿದ್ದು, ಅದನ್ನು ನೋಡಿ ಭಾರತೀಯ ಚಿತ್ರರಂಗದ ಪ್ರತಿಕ್ರಿಯೆ ಏನಿರಬಹುದು ಎಂಬುದು ಎಲ್ಲರಿಗೂ ಕುತೂಹಲವಾಗಿದೆ.

ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದಾರೆ.

 

Spread the love
Click to comment

Copyright © 2019 PopcornKannada.com