Cinema News
ರವಿ ಬೆಳೆಗೆರೆಯ ಕಾದಂಬರಿ ಆಧಾರಿತ ಚಿತ್ರಕ್ಕೆ ಅನೀಶ್ ನಾಯಕ

ಹಿರಿಯ ಪತ್ರಕರ್ತ ರವಿಬೆಳಗೆರೆಯವರ ಫೇಮಸ್ ಕಾದಂಬರಿ ‘ಒಮರ್ಟಾ’ ಈಗ ಸಿನಿಮಾವಾಗುತ್ತಿದ್ದು,ಅದಕ್ಕೆ ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನ ಮಾಡುತ್ತಿದ್ದಾರೆ. ಅನಿಶ್ ತೇಜೇಶ್ವರ್ ನಾಯಕರಾಗಿ ನಟಿಸುತ್ತಿದ್ಧಾರೆ.
ಬೆಂಗಳೂರಿನ ಅಂಡರ್‌ವರ್ಲ್ಡ್ ಬಗ್ಗೆ ಕಾಲ್ಪನಿಕೆ ಕಾದಂಬರಿಯಾಗಿರುವ ಈ ಒಮರ್ಟಾದ ರೈಟ್ಸ್‌ನ್ನು ಚಿತ್ರತಂಡ ಈಗಾಗಲೇ ಪಡೆದುಕೊಂಡಿದೆ.

ಮೊದಲ ಬಾರಿಗೆ ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಖುಷಿಯ ವಿಚಾರ. ಜೀವಾ ಎನ್ನುವ ಕ್ಯಾರೆಕ್ಟರ್ ಬಹಳ ಯೂನಿಕ್ ಆಗಿದೆ. ನಾನು ಈಗಾಗಲೇ ಈ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದೇನೆ ಎಂದು ಚಿತ್ರದ ತಯಾರಿ ಬಗ್ಗೆ ನಟ ಅನೀಶ್ ತಿಳಿಸಿದ್ದಾರೆ.

ಗುಳ್ಟು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಪ್ರಶಾಂತ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್‌ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

Continue Reading