Cinema News

ಓಂ ಸಾಯಿ ಪ್ರಕಾಶ್ ಅವರ ‘ಜಗಿ ಜಗನ್ನಾಥ್’ನಲ್ಲಿದೆ ಅಘೋರಿಯ ಕಥೆ

Published

on

ಈವರೆಗೆ ಸೆಂಟಿಮೆಂಟ್ ಫ್ಯಾಮಿಲಿ ಎಂಟಟೈನರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಮಾಸ್ ಎಂಟರ್‍ಟೈನರ್ ಚಿತ್ರ ಜಗಿ ಜಗನ್ನಾಥ್ ಕೂಡ ಈವಾರ ಬಿಡುಗಡೆಯಾಗುತ್ತಿದೆ. ಲಿಖಿತ ರಾಜ್ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಬಹಳ ದಿನಗಳ ನಂತರ ದುನಿಯಾ ರಶ್ಮಿ ಈ ಚಿತ್ರದ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ.

 

ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಾಯಿಪ್ರಕಾಸ್ ಇದು ಆ್ಯಕ್ಷನ್ ಕಥಾನಕ ಹೊಂದಿರುವ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಜಗಿ ಜಗನ್ನಾಥ್ ಟೈಟಲ್ ಇಟ್ಟಿದ್ದೇವೆ. ಪೇಪರ್ ಹಾಕುವ ಹುಡುಗನೊಬ್ಬ ಹೇಗೆ ಅಘೋರಿಯಾದ ಎಂಬ ಕಥೆಯನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಈ ಚಿತ್ರ ಇಷ್ಟವಾದ್ದರಿಂದ ನಿರ್ದೇಶನ ಮಾಡಲು ಒಪ್ಪಿದೆ. ಇದೊಂದು ರಾ…… ಲವ್ ಸ್ಟೋರಿ.

 

 

ಲಿಖಿತ್ ಈ ಚಿತ್ರದಲ್ಲಿ ನಾಯಕನಾಗಿ ತುಂಬಾ ರಿಸ್ಕ್ ತಗೊಂಡು ಫೈಟ್ ಮಾಡಿದ್ದಾರೆ ಎಂದು ಹೇಳಿದರು. ನಾಯಕ ಲಿಖಿತ್ ಮಾತನಾಡಿ ಒಬ್ಬ ಕಾಮನ್ ಮ್ಯಾನ್ ಹೇಗೆ ಅಘೋರಿಯಾಗುತ್ತಾನೆ. ಆತನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಅಂತ ಹೇಳುವ ಚಿತ್ರವಿದು. ಪೇಪರ್ ಹಾಕುವ ಹುಡುಗನ ಕಥೆಯಿದು ಎಂದು ಹೇಳಿದರು. ನಾಯಕಿ ರಶ್ಮಿ ಮಾತನಾಡಿ ನಾನು ಈ ಚಿತ್ರದಲ್ಲಿ ಒಬ್ಬ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೇ ಚಿತ್ರದಲ್ಲಿ ನಾನು ಬೂರ್ಕಾ ಹಾಕಿದ್ದೇನೆ. ಜಯಪುರದಲ್ಲಿ ಹಾಡಿನ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು. ಛಾಯಾಗ್ರಾಹಕ ರೇಣುಕುಮಾರ್, ವಿತರಕ ಬಾಲು, ಸಾಹಸ ನಿರ್ದೇಶಕ ಹ್ಯಾರಿಸ್ ಜಾನಿ ಈ ಚಿತ್ರದ ಕುರಿತು ವಿವರಗಳನ್ನು ಹಂಚಿಕೊಂಡರು.

 

Spread the love
Click to comment

Copyright © 2019 PopcornKannada.com