Cinema News
ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ
ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್ ಕಥೆಗೆ ನಿಖಿಲ್ ಹೀರೋ ಆಗಲಿದ್ದಾರೆ.
ಪೈಲ್ವಾನ್ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಅವರು ನಿಖಿಲ್‌ಗೆ ನಿರ್ದೇಶನ ಮಾಡಲಿದ್ದಾರೆ. ಅವರು ಈ ರಿಯಲ್ ಕಥೆಗೆ ಚಿತ್ರಕಥೆ ಬರೆಯುತ್ತಿದ್ದು, ನೈಜ ಘಟನೆಗಳನ್ನು ಆಧರಿಸಿದೆಯಂತೆ.
ಈಗಾಗಲೇ ಚೆನ್ನೈನಲ್ಲಿ ಕುಳಿತು ಕಥೆಯನ್ನು ಫೈನಲ್ ಮಾಡುತ್ತಿರುವ ಕೃಷ್ಣ ಈ ಚಿತ್ರದಲ್ಲಿ ನಿಖಿಲ್ ಅವರನ್ನು ಡಿಫ್ರೆಂಟ್ ಆಗಿ ತೋರಿಸಲಿದ್ದಾರೆ. ವಿಶೇಷ ಎಂದರೆ ನಿಖಿಲ್ ಸಹ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದು, ಡಿಫ್ರೆಂಟ್ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರಂತೆ .
ಸದ್ಯಕ್ಕೆ ಉಳಿದ ತಾರಾಗಣ, ತಂತ್ರಜ್ಞರು ಯಾರು ಎಂಬುದು ಇನ್ನೂ ಡಿಸೈಡ್ ಆಗಿಲ್ಲ. ಆದರೆ ಒಂದೊಳ್ಳೆ ಕಥೆಯ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ನಟಿಸಲಿದ್ದಾರೆ ನಿಖಿಲ್.