Cinema News
ಫೆ 10ಕ್ಕೆ ನಿಖಿಲ್ಕುಮಾರ್ ಎಂಗೇಜ್ಮೆಂಟ್
 
																								
												
												
											 
ನಿಖಿಲ್ಕುಮಾರಸ್ವಾಮಿ ನಟನೆಯ ಹೊಸ ಚಿತ್ರದ ಮುಹೂರ್ತ ಗುರುವಾರ ಬೆಂಗಳೂರಿನ ಬಸವನಗುಡಿಯ ಕಾರಂಜಿ ಆಂಜನೇಯನ ದೇವಸ್ಥಾನದಲ್ಲಿ ನಡೆದಿದೆ, ಜತೆಗೆ ಫೆ 10ಕ್ಕೆ ಎಂಗೇಜ್ಮೆಂಟ್ ಡೇಟ್ ಫಿಕ್ಸ್ ಆಗಿದೆ.

ಹೌದು, ವಿಜಯನಗರದ ಶಾಸಕ ಕೃಷ್ಣಪ್ಪ ಅವರ ಸಹೋದರನ ಪುತ್ರಿ ರೇವತಿ ಜತೆ ನಿಖಿಲ್ ಅವರ ಮದುವೆ ಎಂದು ಫಿಕ್ಸ್ ಆಗಿತ್ತು. ಸದ್ಯದಲ್ಲೇ ಮದುವೆ ದಿನಾಂಕವನ್ನು ತಿಳಿಸುವುದಾಗಿ ನಿಖಿಲ್ ತಿಳಿಸಿದ್ದರು. ಈಗ ನಿಶ್ಚಿತಾರ್ಥದ ದಿನಾಂಕವನ್ನು ಫಿಕ್ಸ್ ಆಗಿದೆ. ಒಟ್ಟಿನಲ್ಲಿ ಈ ವರ್ಷ ನಿಖಿಲ್ ಕಲ್ಯಾಣ ಪಕ್ಕಾ ಎನ್ನಲಾಗುತ್ತಿದೆ. ಇನ್ನು ಕೊಂಡ ವಿಜಯ್ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಲಹರಿ ವೇಲು ನಿರ್ಮಾಣ ಮಾಡುತ್ತಿದ್ದು, ಅದರ ಮುಹೂರ್ತ ಇಂದು ನಡೆದಿದೆ. ನಿಖಿಲ್ಗೆ ಈ ಸಿನಿಮಾದಲ್ಲಿ ಕಾಶ್ಮಿರ ಪರದೇಶಿ ಎಂಬ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರನ್ನು ಬಿಟ್ಟು ಇನ್ನು ಒಬ್ಬರು ನಾಯಕಿ ಈ ಚಿತ್ರದಲ್ಲಿರಲಿದ್ದಾರೆ. ಇದು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಾಗಿದೆ.
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											