Cinema News
ತೆಲುಗಿನ ಹಿಟ್ ಡೈರೆಕ್ಟರ್ ಜೊತೆ ನಿಖಿಲ್ ಹೊಸ ಚಿತ್ರ
ನಿಖಿಲ್ ಕುಮಾರಸ್ವಾಮಿ ನಟನೆಯ ಮುಂದಿನ ಸಿನಿಮಾಗೆ ಕೃಷ್ಣ ಎಂದು ಸುದ್ದಿಯಾಗಿತ್ತು, ಅದರ ಬೆನ್ನಲ್ಲೆ ಈಗ ಮತ್ತೊಂದು ಸಿನಿಮಾದ ಅನೌನ್ಸ್‌ಮೆಂಟ್ ಆಗಿದ್ದು ಅದರ ನಿರ್ದೇಶಕರು ಕೊಂಡ ವಿಜಯ್‌ಕುಮಾರ್.
ತೆಲುಗಿನ ಸೂಪರ್ ಹಿಟ್ ಸಿನಿಮಾಗಳಾದ ಗುಂಡೆ ಜಾರಿ ಗುಲ್ಲಾಂತಾಯಿಂದೆ, ಒಕ ಲೈಲಾ ಕೋಸಮ್ ನಿರ್ದೇಶಕ ವಿಜಯ್‌ಕುಮಾರ್ ಕೊಂಡ ನಿಖಿಲ್ ಅವರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ, ಅದನ್ನು ಲಹರ್ ಆಡಿಯೋ ಸಂಸ್ಥೆ ನಿರ್ಮಾಣ ಮಾಡಲಿದೆ.
ಈಗಾಗಲೇ ನಿರ್ಮಾಣ ಸಂಸ್ಥೆಯಿಂದ ಕಲಾವಿದರ ಆಯ್ಕೆಗೆ ಕಾಸ್ಟಿಂಗ್ ಕಾಲ್ ಮಾಡಿದ್ದು, ಸಂಕ್ರಾಂತಿ ಒಳಗೆ ಚಿತ್ರ ಸೆಟ್ಟೇರಲಿದೆಯಂತೆ. ಆದರೆ ಈ ನಡುವೆ ಕೃಷ್ಣ ನಿಖಿಲ್‌ಗಾಗಿ ಹೆಣೆಯುತ್ತಿದ್ದ ಕಥೆ ಏನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಉತ್ತರಾಯಣ ಪುಣ್ಯ ಕಾಲದಿಂದ ನಿಖಿಲ್ ಅವರ ಸಿನಿಮಾ ಬದುಕಿಗೆ ಒಂದು ತಿರುವು ಸಿಗಲಿದೆ ಎನ್ನಲಾಗುತ್ತಿದೆ.