Cinema News
ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಮಂಡ್ಯದ ಮೂವರಿಗೆ ಸಹಾಯಧನ ನೀಡಿದ ನಟ ನಿಖಿಲ್

ಮಂಡ್ಯದ ಕೆ.ಎಂ ದೊಡ್ಡಿಯಲ್ಲಿ ಅಪಘಾತ ಗೊಂಡವರನ್ನು ಕಾಪಾಡಲು ಹೋಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದ ಮಣಿಗೆರೆ ದೇವರಾಜು ಬಿದರ ಹೊಸಹಳ್ಳಿಯ ಪ್ರಸನ್ನ ಮತ್ತು ಪುಟ್ಟ ಅವರ ಕುಟುಂಬಕ್ಕೆ ನಟ, ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಸಹಾಯಧನ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಆಪ್ತರಾದ ಸುನೀಲ್ ಮತ್ತು ಸಂತೋಷ್ ಮೂಲಕ ಈ ದುರದೃಷ್ಟಕರ ಘಟನೆಯಲ್ಲಿ ಸಾವನ್ನಪ್ಪಿದ ಮೂವರ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡಿದ್ದಾರೆ.
ಚುನಾವಣೆಯಲ್ಲಿ ಸೋತ ಮೇಲೂ ನಾನು ಮಂಡ್ಯದಲ್ಲೇ ಇರುತ್ತೇನೆ ಎಂದು ಹೇಳಿರುವ ನಿಖಿಲ್ ಕುಮಾರಸ್ವಾಮಿ ಅವರ ಈ ಸಹಾಯ ಮನೋಭಾವವನ್ನು ಮಂಡ್ಯದ ಜನರು ಶ್ಲಾಘಿಸಿದ್ದಾರೆ.

Continue Reading