Cinema News
ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ರನ್ನ ಸೋನು ಗೌಡ ಏನಂಥ ಕರೀತಾರೆ ಗೊತ್ತಾ?

ಸ್ಯಾಂಡಲ್ವುಡ್ ನಟಿ ಸೋನು ಗೌಡ ಗುಳ್ಟು, ಐ ಲವ್ ಯೂ, ಯುವರತ್ನ ಚಿತ್ರದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಸೋನು ಗೌಡ ಫೋಟೋವೊಂದು ಸೋಷಿಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ನಟಿ ಸೋನು ಗೌಡಗೆ ಮಹಾನಟಿ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದು, ಇದೀಗ ಇಬ್ಬರು ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಇದುವರೆಗೂ ಸ್ಯಾಂಡಲ್ ವುಡ್ ನ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಆದರೆ ಕೀರ್ತಿ ಸುರೇಶ್ ಗೆ ಸೋನು ಗೌಡ ಜೊತೆ ಉತ್ತಮ ಬಾಂಧವ್ಯವಿದೆ. ಇಬ್ಬರಿಗೂ ಸಾಕಷ್ಟು ವರ್ಷಗಳಿಂದ ಪರಿಚಯವಿದ್ದು, ಇದೀಗ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದು ಆ ಫೋಟೋಗಳು ವೈರಲ್ ಆಗಿದೆ.
ಕೀರ್ತಿ ಸುರೇಶ್ ಮತ್ತು ಸೋನು ಗೌಡ ಒಂದೇ ಗ್ಯಾಂಗ್ನ ಸ್ನೇಹಿತರು. ಕೀರ್ತಿ ಮತ್ತು ಸೋನುಗೆ ಪರಿಚಯವಿರುವ ಸ್ನೇಹಿತರಿಂದ ಪರಿಚಯವಾಗಿದ್ದು, ಸಾಕಷ್ಟು ವರ್ಷಗಳಿಂದ ಈ ಸ್ನೇಹ ಸಂಬಂಧ ಸಾಗುತ್ತಿದೆ. ಇದೀಗ ಸ್ನೇಹಿತರ ಮದುವೆ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗಿದ್ದು, ಕೀರ್ತಿ ಸುರೇಶ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕೀರ್ತಿಯ ಫೋಟೋಗೆ ಕಿಟ್ಟಿ ಎಂದು ಸೋನು ಕಮೆಂಟ್ ಮಾಡಿದ್ದಾರೆ. ನಟಿ ಕೀರ್ತಿ ಅನ್ನು ಸೋನು `ಕಿಟ್ಟಿ’ ಎಂದು ಕರೆಯುತ್ತಾರೆ. ಇವರಿಬ್ಬರ ಸ್ನೇಹ ನೋಡಿದ ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
